
ಬೆಳಗಾವಿ: ಮಹಾ ಕುಂಭಮೇಳದ ಸಮಯದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಶವ ಇಂದು ಸಂಜೆ ವಿಮಾನದ ಮೂಲಕ ಬೆಳಗಾವಿಗೆ ಬರಲಿದೆ.
ಪ್ರಯಾಗ್‌ರಾಜ್‌ನಿಂದ ಬುಧವಾರ ರಾತ್ರಿಯೇ ಅಂಬುಲೆನ್ಸ್ ಮೂಲಕ ಶವಗಳು ಹೊರಟಿದ್ದು ಬೆಳಗ್ಗೆ ದೆಹಲಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ದೆಹಲಿಯಿಂದ ಹೊರಟ ವಿಮಾನ ಸಂಜೆ 5:30ಕ್ಕೆ ಬೆಳಗಾವಿಗೆ ಬರಲಿದೆ.
ಒಂದು ಅಂಬುಲೆನ್ಸ್‌ನಲ್ಲಿ ಜ್ಯೋತಿ ಹತ್ತರವಾಠ (44) ಮತ್ತು ಮಗಳು ಮೇಘಾ ಹತ್ತರವಾಠ(24) ಅವರ ಶವ ಇದ್ದರೆ ಮತ್ತೊಂದು ಅಂಬುಲೆನ್ಸ್‌ನಲ್ಲಿ ಶೆಟ್ಟಿ ಗಲ್ಲಿಯ ಅರುಣ್ ಕೋಪರ್ಡೆ(61), ಶಿವಾಜಿನಗರದ ಮಹಾದೇವಿ ಬಾವನೂರ(48) ಮೃತದೇಹವಿದೆ.
ಪ್ರಯಾಗ್‌ರಾಜ್ ದುರಂತದಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. 080-22340676ಗೆ ಕರೆ ಮಾಡಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.
