
ಮೂಲ್ಕಿ: ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ನಡೆಯುವ ಕಾಂತಾಬಾರೆ ಬೂದಾಬಾರೆ ಕಂಬಳ ನಾಳೆಯಿಂದ (ಫೆ.1) ನಡೆಯಲಿದ್ದು, ಚಂದ್ರಶೇಖರ ಸ್ವಾಮೀಜಿ ನಾಳೆ ಬೆಳಿಗ್ಗೆ ಕಂಬಳ ಉದ್ಘಾಟಿಸಲಿದ್ದಾರೆ. ಕಂಬಳವು ಶಿಸ್ತುಬದ್ಧವಾಗಿ ನಡೆಯಲಿದ್ದು, ಜೊತೆಗೆ ಸರಕಾರ ಕೊಟ್ಟ ಸೂಚನೆಯಂತೆ ನಡೆಯಲಿದೆ.
ಈ ಕಂಬಳೋತ್ಸವದಲ್ಲಿ ಮಹಾರಾಷ್ಟ್ರದ ಸರ್ಕಾರದ ಸಾರಿಗೆ ಸಚಿವರಾದ ಪ್ರತಾಪ್ ಜಿ. ಬಾಬುರಾವ್ ನಾಯಕ್, ಕರ್ನಾಟಕ ಸರ್ಕಾರದ ಸಭಾಧ್ಯಕ್ಷರಾದ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡು ರಾವ್, ಬೇಲೂರು ಕ್ಷೇತ್ರದ ಶಾಸಕರಾದ ಗೋಪಾಲ್ ಕೃಷ್ಣ, ಶಾಸಕ ಬ್ರಿಜೇಶ್ ಚೌಟ, ಶಾಸಕ ಉಮಾನಾಥ್ ಕೋಟ್ಯಾನ್, ಕ್ರಿಕೆಟಿಗ ರವಿ ಶಾಸ್ತ್ರಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ತುಳು ಮತ್ತು ಕನ್ನಡ ಚಿತ್ರರಂಗದ ನಟ ನಟಿಯರು ಭಾಗವಹಿಸಲಿದ್ದಾರೆ.
ಜೊತೆಗೆ ‘ಸಹಕಾರ ರತ್ನ’ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ‘ಸಹಕಾರಿ ವೀರ ಪ್ರಶಸ್ತಿ’ ನೀಡುವುದರ ಜೊತೆಗೆ ಇತರ 15 ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
