Home ಸುದ್ದಿಗಳು ಬಾಗಲಕೋಟೆ: ಕಾರು, ಎರಡು ಬೈಕ್‍ಗಳ ನಡುವೆ ಸರಣಿ ಅಪಘಾತ – ಮೂವರ ದುರ್ಮರಣ

ಬಾಗಲಕೋಟೆ: ಕಾರು, ಎರಡು ಬೈಕ್‍ಗಳ ನಡುವೆ ಸರಣಿ ಅಪಘಾತ – ಮೂವರ ದುರ್ಮರಣ

0
ಬಾಗಲಕೋಟೆ: ಕಾರು, ಎರಡು ಬೈಕ್‍ಗಳ ನಡುವೆ ಸರಣಿ ಅಪಘಾತ – ಮೂವರ ದುರ್ಮರಣ

ಬಾಗಲಕೋಟೆ: ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ಟಾಟಾ ಏಸ್, ಕಾರು, ಎರಡು ಬೈಕ್‍ಗಳ ನಡುವೆ ಸರಣಿ ಅಪಘಾತ ನಡೆದಿದೆ.

ಜಮಖಂಡಿಯಿಂದ ವಿಜಯಪುರಕ್ಕೆ ತರಳುತ್ತಿದ್ದ ಟಾಟಾ ಏಸ್‍ಗೆ ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.

ಇದೇ ವೇಳೆ ಟಾಟಾ ಏಸ್ ಹಿಂದೆ ಇದ್ದ ಎರಡು ಬೈಕ್‍ಗಳು ಡಿಕ್ಕಿಯಾಗಿವೆ. ಪರಿಣಾಮ ಟಾಟಾ ಏಸ್, ಕಾರು ಹಾಗೂ ಬೈಕ್‍ನಲ್ಲಿದ್ದ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಮೃತರ ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‍ಐ ಗಂಗಾಧರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here