
ಮೈಸೂರು: ಮಹಾ ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ ಸ್ನಾನ ಮಾಡುತ್ತಿರುವ ರೀತಿಯ ಫೇಕ್ ಫೋಟೊ ವೈರಲ್ ಮಾಡಿದ ಕಾರಣ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ನೀಡಿದ ದೂರಿನ ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರಕಾಶ್ ರಾಜ್, 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಸತ್ಯಾಸತ್ಯತೆ ಎಲ್ಲರಿಗೂ ತಿಳಿಯಬೇಕು ಎಂದಿದ್ದಾರೆ.
ಕುಂಭಮೇಳದ ಪುಣ್ಯ ಸ್ನಾನ ದೇಶದಲ್ಲಿ ನಡೆಯುತ್ತಿದೆ. ಹಿಂದೂ ಧರ್ಮದವರಿಗೆ ಹಾಗೂ ದೇವರನ್ನ ನಂಬುವವರಿಗೆ ಅದು ಪುಣ್ಯವಾದ ಸ್ಥಳ. ಈಗ ಎಐ ಆ್ಯಪ್ ಬಳಿಸಿ ಪ್ರಕಾಶ್ ರೈ ಕುಂಭಮೇಳದಲ್ಲಿ ಸ್ನಾನ ಮಾಡಿದ್ರಾ? ಎಂದು ಫೋಟೊ ವೈರಲ್ ಮಾಡುತ್ತಿದ್ದಾರೆ.
ಮೊದಲಿನಿಂದಲೂ ಪ್ರಕಾಶ್ ರೈ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದಿದ್ದಾರೆ. ಪ್ರಶಾಂತ್ ಸಂಬರ್ಗಿ ಪ್ರಖ್ಯಾತರೋ? ಕುಖ್ಯಾತರೊ? ನನಗೆ ಗೊತ್ತಿಲ್ಲ. ದೇಶದಲ್ಲಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವುದು ಅಭ್ಯಾಸವಾಗಿ ಬಿಟ್ಟಿದೆ ಎಂದರು.
ಇದನ್ನ ಯಾರು ಪ್ರಶ್ನೆ ಮಾಡುತ್ತಿಲ್ಲ. ಧ್ವೇಷವನ್ನು ಹರಡುತ್ತಿದ್ದಾರೆ ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
