Home ಸುದ್ದಿಗಳು ಬಜೆಟ್: 12 ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ವಿನಾಯಿತಿ

ಬಜೆಟ್: 12 ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ವಿನಾಯಿತಿ

0
ಬಜೆಟ್: 12 ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ವಿನಾಯಿತಿ

ನವದೆಹಲಿ: 2025-26 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇದು ಮಹತ್ವಾಕಾಂಕ್ಷೆಗಳ ಬಜೆಟ್ ಎಂದು ಬಣ್ಣಿಸಿದ್ದಾರೆ.

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿಜವಾಗಿಸಿದ್ದಾರೆ.

12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವನ್ನು ಅವರು 2025ರ ಬಜೆಟ್​​ನಲ್ಲಿ ಒದಗಿಸಿಕೊಟ್ಟಿದ್ದಾರೆ. ಮುಂದಿನ ವಾರ ಹೊಸ ಮಸೂದೆ ಮಂಡನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ 10 ಲಕ್ಷ ರೂ. ವರೆಗೆ ಆದಾಯ ಇರುವವರಿಗೆ 50,000 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ಘೋಷಣೆ ಮಾಡಿರುವ ಪ್ರಕಾರ, 10 ಲಕ್ಷ ರೂ, ವರೆಗೆ ಆದಾಯಕ್ಕೆ ತೆರಿಗೆ ಇಲ್ಲ. ಇದರಿಂದ ವೇತನ ವರ್ಗಕ್ಕೆ 50 ಸಾವಿರ ರೂಪಾಯಿ ಲಾಭ ಆದಂತಾಯಿತು.

12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಈ ಹಿಂದೆ 80,000 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ಶೂನ್ಯ ತೆರಿಗೆ ಇದೆ. ಹೀಗಾಗಿ ವೇತನ ವರ್ಗಕ್ಕೆ 80,000 ರೂ. ಉಳಿತಾಯವಾಗಲಿದೆ. 15 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಇಂದಿನ ತೆರಿಗೆ ಪದ್ಧತಿಯಲ್ಲಿ 1.40 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ ಅದು 45,000 ರೂ. ಆಗಿರಲಿದ್ದು 95,000 ರೂ. ಉಳಿತಾಯವಾಗಲಿದೆ.

20 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 2.90 ಲಕ್ಷ ತೆರಿಗೆ ವಿಧಿಸಲಾಗುತ್ತಿತ್ತು. ಈಗ 1.40 ಲಕ್ಷ ತೆರಿಗೆ ವಿಧಿಸಲಾಗುತ್ತದೆ. ಇದರಿಂದ 1.50 ಲಕ್ಷ ರೂ. ಉಳಿತಾಯವಾಗಲಿದೆ. 30 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 5.90 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿದ್ದರೆ ಈಗ 4.20 ಲಕ್ಷ ರೂ. ವಿಧಿಸಲಾಗುತ್ತದೆ. ಇದರಿಂದ 1.70 ಲಕ್ಷ ರೂ. ಉಳಿತಾಯವಾಗಲಿದೆ.

50 ಲಕ್ಷ ರೂ. ವರೆಗಿನ ಆದಾಯಕ್ಕೆ ಹಿಂದಿನ ತೆರಿಗೆ ಪದ್ಧತಿಯಲ್ಲಿ 11.90 ಲಕ್ಷ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈಗ 10.20 ಲಕ್ಷ ರೂ.ಗೆ ತೆರಿಗೆ ಇಳಿಕೆ ಮಾಡಲಾಗಿದೆ. ಇದರಿಂದ 1.70 ಲಕ್ಷ ರೂ. ಲಾಭವಾಗಲಿದೆ.

 

LEAVE A REPLY

Please enter your comment!
Please enter your name here