
ನವದೆಹಲಿ: ಕರ್ನಾಟಕಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ವಿಶೇಷ ಮತ್ತು ಹೊಸ ಯೋಜನೆಗಳು ಪ್ರಕಟವಾಗಿಲ್ಲ.
ಎಂದಿನಂತೆ ಹಳೆಯ ರೈಲ್ವೇ ಯೋಜನೆಗಳಿಗೆ ಒಂದಿಷ್ಟು ಅನುದಾನ ದೊರೆತಿದೆ ಬಿಟ್ಟರೆ ಹೊಸದೇನು ಇಲ್ಲ.
ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ 1.5 ಲಕ್ಷ ಕೋಟಿ ನೆರವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೆರವು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. 2021ರಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಅದರ ಯಶಸ್ಸಿನ ಆಧಾರದ ಮೇಲೆ 2ನೇ ಯೋಜನೆಯನ್ನು 2025-39ರವರೆಗೂ ವಿಸ್ತರಿಸಲಾಗಿದೆ. ಹೊಸ ಯೋಜನೆಗಳಿಗಾಗಿ 10 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಸಿಕ್ಕಿದ್ದೇನು?
* ಗದಗ – ವಾಡಿ ರೈಲ್ವೇ ಮಾರ್ಗ : 549 ಕೋಟಿ ರೂ.
* ತುಮಕೂರು – ಚಿತ್ರದುರ್ಗ ರೈಲ್ವೇ ಮಾರ್ಗ – ದಾವಣಗೆರೆ ಮಾರ್ಗ: 549 ಕೋಟಿ ರೂ.
* ರಾಯದುರ್ಗ – ಕಲ್ಯಾಣದುರ್ಗ- ತುಮಕೂರು ರೈಲ್ವೇ ಮಾರ್ಗ: 434 ಕೋಟಿ ರೂ.
* ಬಾಗಲಕೋಟೆ – ಕುಡಚಿ ರೈಲ್ವೇ ಮಾರ್ಗ: 428 ಕೋಟಿ ರೂ.
* ಬೆಂಗಳೂರು – ವೈಟ್‌ಫೀಲ್ಡ್ – ಕೆಆರ್ ಪುರಂ ರೈಲ್ವೇ ಮಾರ್ಗ: 357 ಕೋಟಿ ರೂ.
* ದೌಂಡ್ – ಕಲಬುರಗಿ ರೈಲ್ವೇ ಮಾರ್ಗದ ವಿದ್ಯುದ್ದೀಕರಣ : 84 ಕೋಟಿ ರೂ.
* ರಾಮನಗರ – ಮೈಸೂರು ರೈಲ್ವೇ ಮಾರ್ಗದ ವಿದ್ಯುದ್ದೀಕರಣ – 10 ಕೋಟಿ ರೂ.
* ಬೆಂಗಳೂರಿನ ಐಐಎಸ್ಸಿ ಅಭಿವೃದ್ಧಿಗೆ ಆದ್ಯತೆ
