
ಶಿವಪಾಡಿ: ಫೆಬ್ರವರಿ 22 ರಿಂದ 26 ರ ತನಕ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ (ರಿ.) ಶಿವಪಾಡಿ ವೈಭವ ಆಚರಣಾ ಸಮಿತಿ ವತಿಯಿಂದ ಶಿವಪಾಡಿ ವೈಭವ ಕಾರ್ಯಕ್ರಮ ನಡೆಯಲಿದ್ದು, ಅದರ ಚಪ್ಪರ ಮುಹೂರ್ತ ಇಂದು ಶಿವಪಾಡಿಯಲ್ಲಿ ನಡೆಯಿತು.
ಫೆಬ್ರವರಿ 22 ರಿಂದ ಐದು ದಿನ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೃಹತ್ ಕೃಷಿ ಮೇಳ, ಆರೋಗ್ಯ ಮೇಳ, ಆಹಾರ ಮೇಳ, ಮನೋರಂಜನಾ ಮೇಳ ಹಾಗೂ ಯಕ್ಷಮೇಳಗಳು ನಡೆಯಲಿದೆ.
ಜೊತೆಗೆ ಕೃಷಿಗೆ ಸಂಬಂಧಿಸಿದ ಗೋಷ್ಠಿಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಪ್ರಭು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಪಾಡಿ ವೈಭವ ಆಚರಣ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಸ್ಥಳೀಯ ಪ್ರಮುಖರಾದ ದಿಲೀಪ್ ಹೆಗ್ಡೆ, ಅನಂತ ನಾಯ್ಕ, ಟ್ರಸ್ಟ್ ಕೋಶಾಧಿಕಾರಿ ಶ್ರೀಕಾಂತ್ ಪ್ರಭು, ಜೊತೆ ಕಾರ್ಯದರ್ಶಿ ಅಶೋಕ ಸಾಮಂತ್, ಟ್ರಸ್ಟಿಗಳಾದ ಕೃಷ್ಣರಾಯ ಪಾಟೀಲ್, ಪ್ರಕಾಶ್ ಪ್ರಭು, ಸ್ನೇಹಸಂಗಮದ ಸಂದೇಶ ಪ್ರಭು, ಚೇತನ ಗಣೇಶ್, ವೀಣಾ ಪಾಟೀಲ್ ಸ್ಥಳೀಯರಾದ ಸುಧೀರ್ ಸಾಮಂತ್, ಅನಿತಾ ಸಾಮಂತ್, ದಯಾನಂದ ಪಾಟೀಲ್, ಕ್ಷಮ, ಅರ್ಚಕ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
