Home ಸುದ್ದಿಗಳು ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಇಂದು ಪ್ರಧಾನಿ ಭೇಟಿ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಇಂದು ಪ್ರಧಾನಿ ಭೇಟಿ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

0
ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಇಂದು ಪ್ರಧಾನಿ ಭೇಟಿ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಭೇಟಿ ನೀಡಲಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.

ಪ್ರಧಾನಿ ಮೋದಿ ಬೆಳಗ್ಗೆ 10:05ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ  ಆಗಮಿಸಲಿದ್ದು,10:45 ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದ್ದಾರೆ. 10:50ಕ್ಕೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದಾರೆ.

ಬೆಳಗ್ಗೆ 11:00 ರಿಂದ 11:30ರ ವರೆಗೆ ಸಂಗಮ್ ಘಾಟ್‌ನಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಸಂತರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.

ಮಧ್ಯಾಹ್ನ 12:30ಕ್ಕೆ ವಾಯುಪಡೆಯ ವಿಮಾನದಲ್ಲಿ ಪ್ರಯಾಗ್‌ರಾಜ್‌ನಿಂದ ಹೊರಡಲಿದ್ದಾರೆ.

 

LEAVE A REPLY

Please enter your comment!
Please enter your name here