
ಬೈಂದೂರು: ಬೆಳಗಾವಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಪೂಜಾರಿ (45) ಎಂಬವರು ಜನವರಿ 30 ರಂದು ನಾಪತ್ತೆಯಾಗಿದ್ದಾರೆ. ಅಂದು ಬೆಳಗ್ಗೆ ಬಿಜೂರು ಗ್ರಾಮದ ನವೋದಯ ಕಾಲೋನಿಯಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದ ಅವರು ತಮ್ಮ ಬ್ಯಾಗ್ ಅನ್ನು ಮನೆಯ ಬಾಗಿಲಲ್ಲಿಯೇ ಇಟ್ಟು ರಿಕ್ಷಾ ಚಾಲಕನಿಗೆ ಪ್ರಯಾಣ ದರವನ್ನು ಪಾವತಿಸಿದ ನಂತರ ಹಿಂತಿರುಗುವುದಾಗಿ ಹೇಳಿದ್ದಾರೆ. ಆದರೆ ಆ ಬಳಿಕ ಅವರು ಹಿಂತಿರುಗಿ ಬಂದಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
ರಮೇಶ್ ಪೂಜಾರಿ ಅವರ ಮಾಹಿತಿ ಕಂಡುಬಂದಲ್ಲಿ ಬೈಂದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
