
ಬ್ರಹ್ಮಾವರ: ಇಲ್ಲಿನ ಸುಪ್ರಸಿದ್ದ ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಮನ್ಮಹಾರಥೋತ್ಸವವು ಫೆ. 13 ರಂದು ನಡೆಯಲಿದ್ದು 12 ರ ಕುಂಭ ಸಂಕ್ರಮಣದಂದು ರಾತ್ರಿ ಕೆಂಡಸೇವೆ ನಡೆಯಲಿದೆ.
14 ರಂದು ರಾತ್ರಿ ಕೆರೆ ದೀಪೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಅಷ್ಟಾವಧಾನ ಸೇವೆ, ಐದೂ ಮೇಳಗಳಿಂದ ಸೇವೆ ಆಟ ಸೇವೆ ನಡೆಯಲಿದೆ.
15 ರಂದು ಸಂಪ್ರೋಕ್ಷಣೆ ನಡೆಯಲಿದೆ.
ಕೆಂಡಸೇವೆಯ ಪ್ರಯುಕ್ತ ರಾತ್ರಿ 7 ಘಂಟೆಯ ತನಕ ದೇವರ ದರ್ಶನ ಮತ್ತು ಸೇವೆಗಳಿಗೆ ಅವಕಾಶವಿದೆ. ಸೇವಾಕರ್ತರು ಅದರ ಒಳಗೆ ದೇವರ ದರ್ಶನ ಮಾಡಿ ಸೇವೆ ಮಾಡಿಸಿಕೊಳ್ಳಬೇಕು. ಕೆಂಡ ಸೇವೆಯ ನಂತರ ಇತರ ಭಕ್ತರಿಗೆ ದೇವರ ದರ್ಶನ ಮತ್ತು ಸೇವೆಗಳಿಗೆ ಅವಕಾಶವಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ ತಿಳಿಸಿದ್ದಾರೆ.
