Home ಸುದ್ದಿಗಳು ರಾಷ್ಟ್ರೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನವೀಕೃತ ಕಛೇರಿಯ ಅನಾವರಣ: 150 ಕೋಟಿ ವೆಚ್ಚದಲ್ಲಿ ನಿರ್ಮಾಣ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನವೀಕೃತ ಕಛೇರಿಯ ಅನಾವರಣ: 150 ಕೋಟಿ ವೆಚ್ಚದಲ್ಲಿ ನಿರ್ಮಾಣ

0
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನವೀಕೃತ ಕಛೇರಿಯ ಅನಾವರಣ: 150 ಕೋಟಿ ವೆಚ್ಚದಲ್ಲಿ ನಿರ್ಮಾಣ

ನವದೆಹಲಿ: ವಿಶ್ವದ ಅತಿ ದೊಡ್ಡ ಸಾಂಸ್ಕೃತಿಕ ಹಾಗೂ ಸಮಾಜ ಸೇವಾ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ನವೀಕೃತ ಕಛೇರಿ ಕಟ್ಟಡವನ್ನು ಅನಾವರಣಗೊಳಿಸಿದೆ.

ದೆಹಲಿಯ ಝಂಡೆವಾಲನ್‌ನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಛೇರಿ ಕೇಶವ ಕುಂಜ್ ಅನ್ನು ನವೀಕರಿಸಲಾಗಿದ್ದು, ಇನ್ನು ಮುಂದೆ ಈ ಕಚೇರಿಯಲ್ಲಿ ಸಭೆಗಳು ನಡೆಯಲಿವೆ. ಮೂಲತಃ 1962 ರಲ್ಲಿ ದೆಹಲಿಯ ಝಂಡೆವಾಲನ್‌ ನಲ್ಲಿ ಒಂದಸ್ಥಿನ ಕಟ್ಟಡದಲ್ಲಿ ಕಛೇರಿಯನ್ನು ಸ್ಥಾಪಿಸಲಾಗಿತ್ತು. ಇದೀಗ ಮೂರು ಕಟ್ಟಡಗಳನ್ನು ಹೊಂದಿರುವ ಕಛೇರಿಯು ಪ್ರಚಾರಕರು ಮತ್ತು ಸ್ವಯಂಸೇವಕರಿಗಾಗಿ 300 ಕೋಣೆಗಳನ್ನು ಹೊಂದಲಿರುವ ಜೊತೆಗೆ ಲೈಬ್ರೆರಿ, ಆಡಿಟೋರಿಯಂ, ಕ್ಲಿನಿಕ್, ಸೌರ ವಿದ್ಯುತ್ ಸೌಲಭ್ಯ ಮತ್ತು ಮರುಬಳಕೆಯ ಒಳಚರಂಡಿ ಸಂಸ್ಕರಣಾ ವ್ಯವಸ್ಥೆಯನ್ನು ಒಳಗೊಂಡಿದೆ.

ಸುಮಾರು 75 ಸಾವಿರ ಸ್ವಯಂಸೇವಕರು ದೇಣಿಗೆ ನೀಡಿದ್ದು 150 ಕೋಟಿ ವೆಚ್ಚದಲ್ಲಿ ಹೊಸ ಕಛೇರಿಯನ್ನು ನಿರ್ಮಿಸಲಾಗಿದೆ. ಸಾಧನ, ಪ್ರೇರಣಾ ಮತ್ತು ಅರ್ಚನಾ ಎಂದು ಕಟ್ಟಡಗಳನ್ನು ಹೆಸರಿಸಲಾಗಿದೆ. ಸಂಘದ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಶಿಲ್ಪವು ಕಟ್ಟಡದ ನೆಲಮಹಡಿಯಲ್ಲಿರಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಮುಖ ಪ್ರತಿಪಾದಕರಲ್ಲಿ ಒಬ್ಬರಾಗಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಾಜಿ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಹೆಸರನ್ನು ಒಂದು ಸಭಾಂಗಣಕ್ಕೆ ಇಡಲಾಗಿದೆ. ಏಕಕಾಲದಲ್ಲಿ 100ಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಭೋಜನಾಲಯವೂ ಕಟ್ಟಡದೊಳಗಿರಲಿದೆ.

ಮೊದಲನೇ ಕಟ್ಟಡದಲ್ಲಿ ಕಛೇರಿ ಇದ್ದರೆ, ಎರಡರಲ್ಲಿ ವಸತಿ ಸೌಲಭ್ಯಗಳು ಇರಲಿವೆ. ಫೆ.19ರಂದು ಕಛೇರಿಯಲ್ಲಿ ಮೊದಲ ಅಧಿಕೃತ ಸಭೆ ನಡೆಯಲಿದೆ ಎಂದು ವರದಿಯಾಗಿದೆ.

 

 

LEAVE A REPLY

Please enter your comment!
Please enter your name here