Home ಕರ್ನಾಟಕ ಕರಾವಳಿ ಮಾರ್ಚ್ 7-9 ರವರೆಗೆ ಸಸಿಹಿತ್ಲು ಬೀಚ್ ನಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ ನ ಎರಡನೇ ಆವೃತ್ತಿ

ಮಾರ್ಚ್ 7-9 ರವರೆಗೆ ಸಸಿಹಿತ್ಲು ಬೀಚ್ ನಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ ನ ಎರಡನೇ ಆವೃತ್ತಿ

0
ಮಾರ್ಚ್ 7-9 ರವರೆಗೆ ಸಸಿಹಿತ್ಲು ಬೀಚ್ ನಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ ನ ಎರಡನೇ ಆವೃತ್ತಿ

ಹಳೆಯಂಗಡಿ: ದೇಶದ ಏಕೈಕ ಅಂತರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಕಾರ್ಯಕ್ರಮವಾದ, ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಎರಡನೇ ಆವೃತ್ತಿಯು ಮಾರ್ಚ್ 7 ರಿಂದ 9 ರವರೆಗೆ ಇಲ್ಲಿನ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ.

ಸರ್ಫಿಂಗ್ ಸ್ವಾಮಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗುವ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಿಂದ ಪ್ರಸ್ತುತಪಡಿಸಲಾಗುವ ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಸ್ಟ್ಯಾಂಡ್-ಅಪ್ ಪ್ಯಾಡಲ್ ಅಥ್ಲೀಟ್ ಗಳು ಭಾಗವಹಿಸುವ ನಿರೀಕ್ಷೆ ಇದೆ.

https://x.com/i/status/1890072985626722652

2024 ರಲ್ಲಿ ನಡೆದ ಮೊದಲನೆ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ ನ ಯಶಸ್ಸಿನಿಂದ ಉತ್ಸಾಹಿತರಾಗಿ ಇದೀಗ ಎರಡನೇ ಆವೃತ್ತಿಯನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಬಾರಿಯ ಸ್ಪರ್ಧೆಯು ಮೊದಲನೇ ಆವೃತ್ತಿಗಿಂತಲೂ ಅತ್ಯುತ್ತಮವಾಗಿ ಮೂಡಿ ಬರಲಿದೆ ಎನ್ನಲಾಗಿದೆ. ಕ್ರೀಡೆಯ ಜೊತೆಗೆ ಅವಿಭಜಿತ ದ.ಕ ಜಿಲ್ಲೆಯ ಸೊಗಡನ್ನು ಪರಿಚಯಿಸಲಿರುವ ಈ ಕಾರ್ಯಕ್ರಮದಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಜಲಕ್ರೀಡೆಗಳ ಬಗ್ಗೆ ಕ್ರೀಡಾಳುಗಳಲ್ಲಿ ಉತ್ಸುಕತೆ ಹೆಚ್ಚುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಭಾರತದತ್ತ ಸೆಳೆಯಲು ಇದೊಂದು ಅತ್ಯುತ್ತಮ ವೇದಿಕೆಯಾಗಲಿದೆ. ಗಮನಸೆಳೆಯುವ ವಿಷಯವೆಂದರೆ, ಭಾರತವು 2026 ರ ಏಷ್ಯನ್ ಗೇಮ್ಸ್‌ಗಾಗಿ ಸರ್ಫಿಂಗ್‌ನಲ್ಲಿ ತನ್ನ ಮೊಟ್ಟ ಮೊದಲ ಕೋಟಾವನ್ನು ಕಾಯ್ದುಕೊಂಡಿದೆ.

 

 

LEAVE A REPLY

Please enter your comment!
Please enter your name here