Home ಸುದ್ದಿಗಳು ರಾಷ್ಟ್ರೀಯ ಭಾರತದಲ್ಲಿ ಮತದಾನದ ಮೇಲೆ ಪ್ರಭಾವ ಬೀರಲು 21 ಮಿಲಿಯನ್ ಡಾಲರ್ ವ್ಯಯಿಸಿದ USAID: DOGE ನಿಂದ ಬಹಿರಂಗ!!

ಭಾರತದಲ್ಲಿ ಮತದಾನದ ಮೇಲೆ ಪ್ರಭಾವ ಬೀರಲು 21 ಮಿಲಿಯನ್ ಡಾಲರ್ ವ್ಯಯಿಸಿದ USAID: DOGE ನಿಂದ ಬಹಿರಂಗ!!

0
ಭಾರತದಲ್ಲಿ ಮತದಾನದ ಮೇಲೆ ಪ್ರಭಾವ ಬೀರಲು 21 ಮಿಲಿಯನ್ ಡಾಲರ್ ವ್ಯಯಿಸಿದ USAID: DOGE ನಿಂದ ಬಹಿರಂಗ!!

ನವದೆಹಲಿ: ಎಲೋನ್ ಮಸ್ಕ್ ನೇತೃತ್ವದ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ (DOGE) ತಂಡವು USAIDಯು ಭಾರತದಲ್ಲಿ ಮತದಾರರ ಮತದಾನದ ಮೇಲೆ ಪ್ರಭಾವ ಬೀರಲು 21 ಮಿಲಿಯನ್ ಡಾಲರ್ ಗಳ ಅನುದಾನ ನೀಡಿರುವುದನ್ನು ಪತ್ತೆ ಹಚ್ಚಿದೆ.

USAID ಯು ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಸ್ವತಂತ್ರ ಏಜೆನ್ಸಿಯಾಗಿದ್ದು ಅದು ನಾಗರಿಕ ವಿದೇಶಿ ನೆರವು ಮತ್ತು ಅಭಿವೃದ್ಧಿ ಸಹಾಯವನ್ನು ನಿರ್ವಹಿಸಲು ರಚಿಸಲಾದ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿಶ್ವದಾದ್ಯಂತ ಹಲವಾರು ದೇಶಗಳಿಗೆ, ಹಲವಾರು ಯೋಜನೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಅನುದಾನವಾಗಿ ನೀಡುತ್ತದೆ.

ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಎಲೋನ್ ಮಸ್ಕ್ ನೇತೃತ್ವದ ಡಿಪಾರ್ಟ್ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ ಅನ್ನುವ ವಿಭಾಗವನ್ನು ಸ್ಥಾಪಿಸಲಾಗಿತ್ತು. ಅಮೇರಿಕಾದ ಸರ್ಕಾರಿ ಸಂಸ್ಥೆಗಳ ದಕ್ಷತೆಯನ್ನು ಹೆಚ್ಚಿಸಲು ಮತ್ತು ದೇಶದ ಆರ್ಥಿಕತೆಯನ್ನು ಸುಧಾರಿಸಲು ವಿಭಾಗಕ್ಕೆ ಪೂರ್ಣ ಸಹಕಾರ ನೀಡಲಾಗಿತ್ತು.

DOGE ಅಸ್ತಿತ್ವಕ್ಕೆ ಬಂದಾಗಿನಿಂದಲೂ USAID ಲೆಕ್ಕಪತ್ರಗಳನ್ನು ಅಧ್ಯಯನ ಮಾಡಿ ಕಡತಗಳನ್ನು ಸಾರ್ವಜನಿಕಗೊಳಿಸಿತ್ತು. ಬೈಡನ್ ಸರ್ಕಾರದ ಹಲವು ಅಕ್ರಮಗಳು ಇದರಿಂದ ಬಯಲಿಗೆ ಬಂದಿದ್ದವು. ಇದೀಗ ಭಾರತದಲ್ಲಿ ಮತದಾರರ ಮತದಾನದ ಮೇಲೆ ಪ್ರಭಾವ ಬೀರಲು 21 ಮಿಲಿಯನ್ ಡಾಲರ್ ಗಳನ್ನು USAID ಮೂಲಕ ಅನುದಾನ ನೀಡಿರುವ ಬಗ್ಗೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಇದು ಚುನಾವಣೆಗಳು ಮತ್ತು ರಾಜಕೀಯ ಪ್ರಕ್ರಿಯೆಯ ಬಲವರ್ಧನೆಗಾಗಿ ಒಕ್ಕೂಟಕ್ಕೆ ಹಂಚಿಕೆಯಾದ ಒಟ್ಟು 486 ಮಿಲಿಯನ್ ಡಾಲರ್ ಬಜೆಟ್‌ನ ಒಂದು ಭಾಗವಾಗಿದೆ ಎಂದು DOGE ತಿಳಿಸಿದೆ.

ಬೈಡನ್ ಸರ್ಕಾರದಲ್ಲಿ ‘ಡೀಪ್ ಸ್ಟೇಟ್’ ಮುಖಾಂತರ ಹಲವಾರು ದೇಶಗಳಲ್ಲಿ ಸರ್ಕಾರಗಳನ್ನು ಬದಲಾಯಿಸಲು, ಎಡಪಂಥೀಯ ವಿಚಾರಧಾರೆಯನ್ನು ಹೆಚ್ಚಿಸಲು, ಅಕ್ರಮ ವಲಸಿಗರನ್ನು ಸ್ಥಾಪಿಸಲು, ಗೃಹಯುದ್ದಗಳನ್ನು ಉತ್ತೇಜಿಸಲು USAID ಮೂಲಕ ಮಿಲಿಯನ್ ಡಾಲರ್ ಗಳ ವ್ಯವಯಿಸಲಾಗಿದೆ ಎನ್ನುವ ಆರೋಪಗಳ ಮಧ್ಯೆ ಈ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

 

 

 

LEAVE A REPLY

Please enter your comment!
Please enter your name here