Home ಜಿಲ್ಲೆ ಆಧ್ಯಾತ್ಮ ಬಿಟ್ಟು ಹೋದರೆ ದೈವವೇ ಉತ್ತರ ಕೊಡುತ್ತದೆ: ಕೋಡಿಮಠದ ಶ್ರೀ ಭವಿಷ್ಯ

ಆಧ್ಯಾತ್ಮ ಬಿಟ್ಟು ಹೋದರೆ ದೈವವೇ ಉತ್ತರ ಕೊಡುತ್ತದೆ: ಕೋಡಿಮಠದ ಶ್ರೀ ಭವಿಷ್ಯ

0
ಆಧ್ಯಾತ್ಮ ಬಿಟ್ಟು ಹೋದರೆ ದೈವವೇ ಉತ್ತರ ಕೊಡುತ್ತದೆ: ಕೋಡಿಮಠದ ಶ್ರೀ ಭವಿಷ್ಯ

ಕೋಲಾರ: ಸಾಮಾನ್ಯವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಭವಿಷ್ಯ ಕೋಲಾರ: ಸಾಮಾನ್ಯವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಭವಿಷ್ಯ ವಾಣಿಯನ್ನು ನಂಬುವುದು ಸಹಜ. ಭಾರತದಂತಹ ದೇಶದಲ್ಲಿ ಈ ನಂಬಿಕೆಗಳು ಸರ್ವೇಸಾಮಾನ್ಯ. ಜ್ಯೋತಿಷ್ಯ ನುಡಿಯುವುದು, ಭವಿಷ್ಯ ಹೇಳುವುದು ಜ್ಯೋತಿಷಿಗಳು ಹೇಳಿದಂತೆ ನಡೆದುಕೊಳ್ಳುವುದು ಇಲ್ಲಿ ಸಹಜ ಪ್ರಕ್ರಿಯೆ. ಕೆಲವು ಪ್ರಸಿದ್ಧ ಸ್ವಾಮೀಜಗಳ ಭವಿಷ್ಯ ನುಡಿದಂತೆ ಆದದ್ದೂ ಇದೆ. ಅಂತಹವರಲ್ಲಿ ಕೋಡಿಮಠದ ಶ್ರೀ ಗಳು ಒಬ್ಬರು.
ಹೌದು, ಇತ್ತೀಚೆಗೆ ನಡೆದ ವಿಧಾನಸಭೆಯ ಚುನಾವಣೆ ಸಂದರ್ಭ ಕೋಡಿಮಠದ ಸ್ವಾಮೀಜಿಗಳು ಈ ಬಾರಿ ಒಂದೇ ಪಕ್ಷ ಬಹುಮತದಿಂದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ನಡುವೆ ಇದೀಗ ಸ್ವಾಮೀಜಿಗಳು ಮತ್ತೊಂದು ವಿಚಾರವಾಗಿ ಭವಿಷ್ಯ ನುಡಿದಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಈ ವರ್ಷ ದೊಡ್ಡ ಅಪಘಾತ ಆಗುತ್ತೆ ಎಂದಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಅದೇ ರೀತಿ ಇನ್ನೂ ಒಂದು ಆಘಾತ ದೇಶಕ್ಕೆ ಕಾದಿದ್ದು, ಅಚಾನಕ್ಕಾಗಿ ಗುಡುಗು ಮಿಂಚು ಬರಲಿದೆ. ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ
ಮುಳುಗಲಿವೆ ಎಂದಿದ್ದಾರೆ. ಅಲ್ಲದೇ ಬಹುಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here