ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ತಡವಾಗುತ್ತಿದ್ದು, ನೀರಿಗೆ ಹಾಹಾಕಾರ ಎದುರಾಗಿದೆ. ಹಲವೆಡೆ ನೀರಿಲ್ಲದ ಕಾರಣ ಶಾಲೆಗಳಿಗೆ ರಜೆಯನ್ನು ಕೂಡ ನೀಡಲಾಗಿದೆ. ವರುಣ ರಾಯನ ಆಗಮನಕ್ಕಾಗಿ ರಾಜ್ಯದ ಜನತೆ ಹಾತೊರೆಯುತ್ತಿದ್ದಾರೆ. ಈ ನಡುವೆ ಶೀಘ್ರದಲ್ಲೇ ಮಾನ್ಸೂನ್ ಮಾರುತಗಳು ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹೌದು, ಮಾನ್ಸೂನ್ ಮಾರುತಗಳು ಶೀಘ್ರದಲ್ಲೇ ಕರ್ನಾಟಕಕ್ಕೆ ಆಗಮಿಸುವುದರಿಂದ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅರಬ್ಬಿ ಸಮುದ್ರದಿಂದ ಸೈಕ್ಲೋನ್ ಉತ್ತರಕ್ಕೆ ಚಲಸಿದ್ದರಿಂದ ಮಾನ್ಸೂನ್ ಮಾರುತಗಳು ಕೇರಳ ಕಡೆಗೆ ಚಲಿಸಲು ಆರಂಭಿಸದ್ದರಿಂದ ಕೇರಳದ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
