
ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿಯು ಇತ್ತೀಚಿನ ದಿಗಳಲ್ಲಿ ಸದಾ ಒಂದಲ್ಲಾ ಒಂದು ವಿವಾದವನ್ನು ಮೈಗೆಳೆದುಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಪಾಕಿಸ್ತಾನದಿಂದ ನಿರಂತರ ಭಯೋತ್ಪಾದಕ ದಾಳಿಯ ಬಳಿಕವೂ ಉಭಯ ತಂಡಗಳು ಕ್ರಿಕೆಟ್ ಪಂದ್ಯಾಟ ನಡೆಸುವುದು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದ್ದರೂ ಬಾಂಗ್ಲಾದೇಶದ ಜೊತೆಗೂ ಪಂದ್ಯಾಟ ನಡೆಸುವುದು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರಿಗೆ ಭರ್ಜರಿ ಸ್ವಾಗತ ನೀಡುವುದು ಮುಂತಾದ ನಡೆಗಳಿಂದ ಭಾರತದ ಕ್ರಿಕೆಟ್ ಮಂಡಳಿಯು ಅಭಿಮಾನಿಗಳ ಕೋಪಕ್ಕೆ ಗುರಿಯಾಗುತ್ತಿತ್ತು. ಇದೀಗ ಈ ಸರಣಿಗೆ ಮತ್ತೊಂದು ವಿವಾದ ಸೇರಿಕೊಂಡಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಭಾರತದ ಹೊಸ ಜೆರ್ಸಿ ಸೋಮವಾರ ಅನಾವರಣಗೊಂಡಿದೆ. ಆದರೆ ಭಾರತದ ಹೊಸ ಜೆರ್ಸಿಯಲ್ಲಿ ಈ ಬಾರಿ ಅತಿಥ್ಯ ವಹಿಸಿರುವ ಪಾಕಿಸ್ತಾನದ ಹೆಸರನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಹೊಸ ಜೆರ್ಸಿಯಲ್ಲಿರುವ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಅವರ ಫೋಟೋಗಳನ್ನು ICC ಬಿಡುಗಡೆ ಮಾಡಿದೆ. ಈ ಹೊಸ ಜೆರ್ಸಿಯಲ್ಲಿ ಪಂದ್ಯಾವಳಿಯ ಲೋಗೋ ಮತ್ತು ಆತಿಥೇಯ ದೇಶದ ಹೆಸರನ್ನು ಮುದ್ರಿಸಲಾಗಿದೆ.
ಈ ನಡೆಯು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತವು ICC ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದಿದ್ದಾರೆ.
