
ಬ್ರಹ್ಮಾವರ: ತಾಲೂಕಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಆರೂರು-ಮುಂಡ್ಕಿನಜೆಡ್ಡು-ಕೊಕ್ಕರ್ಣೆ-ನಾಲ್ಕೂರು ರಸ್ತೆ 17.50 ಕಿ.ಮೀ ರಿಂದ 18.00 ಕಿಮೀ ವರೆಗೆ ಮಳೆಯಿಂದ ಕುಸಿದ ಭಾಗದಲ್ಲಿ ರಸ್ತೆ ಬದಿ ತಡೆಗೋಡೆ ಮತ್ತು ಸ್ಲ್ಯಾಬ್ ಮೋರಿ ನಿರ್ಮಾಣ ಕಾಮಗಾರಿ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಮಾ.2 ರಿಂದ ಏ.30 ರವರೆಗೆ ಜಿಲ್ಲಾ ಮುಖ್ಯ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಮತ್ತು ವಾಹನ ಸಂಚಾರ ನಿರ್ಬಂಧಿಸಲಾಗುವುದು. ಸಾರ್ವಜನಿಕರು ಈ ದಿನಗಳಲ್ಲಿ ಕೊಕ್ಕರ್ಣೆ-ಮಾರಾಳಿ-ಹೊರ್ಲಾಳಿ-ನಾಲ್ಕೂರು ಜಿಲ್ಲಾ ಪಂಚಾಯತ್ ರಸ್ತೆಯ ಬದಲೀ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
