Home ಸಿನೆಮಾ ರಕ್ಷಿತ್ ಶೆಟ್ಟಿ ನಿರ್ಮಾಣದ “ಮಿಥ್ಯ” ಮಾ. 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

ರಕ್ಷಿತ್ ಶೆಟ್ಟಿ ನಿರ್ಮಾಣದ “ಮಿಥ್ಯ” ಮಾ. 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

0
ರಕ್ಷಿತ್ ಶೆಟ್ಟಿ ನಿರ್ಮಾಣದ “ಮಿಥ್ಯ” ಮಾ. 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ

ಬೆಂಗಳೂರು: ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ನಿರ್ಮಾಣದ, ಸುಂಮತ್ ಭಟ್ ನಿರ್ದೇಶಿಸಿರುವ ಚಿತ್ರ “ಮಿಥ್ಯ” ಮಾ. 7 ರಂದು ಬಿಡುಗಡೆಯಾಗಲಿದೆ.

ಸದಾ ವಿಷಯಾಧಾರಿತ ಚಲನಚಿತ್ರಗಳನ್ನು ತೆರೆ ಮೇಲೆ ತರುವ ರಕ್ಷಿತ್ ಶೆಟ್ಟಿ ಈ ಬಾರಿಯೂ ಹೊಸ ಕಥೆಯೊಂದಿಗೆ ಜನರ ಮುಂದೆ ಬರಲಿದ್ದಾರೆ.

ಹೆತ್ತವರನ್ನು ಕಳೆದುಕೊಂಡ 11 ವರ್ಷದ ಬಾಲಕ ಮಿಥುನ್, ಈತನನ್ನು ಪ್ರೀತಿಯಿಂದ ಮಿಥ್ಯ ಎಂದು ಕರೆಯಲಾಗುತ್ತದೆ. ಈತ ತನ್ನ ಹೆತ್ತವರನ್ನು ಕಳೆದುಕೊಂಡು ಆ ನೋವಿನಿಂದ ಹೊರಬರಲಾರದೆ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ಮಿಥ್ಯ.

ಚಿತ್ರದ ಮುಖ್ಯ ಪಾತ್ರದಲ್ಲಿ ಬಾಲನಟ ಆತಿಶ್ ಶೆಟ್ಟಿ ನಟಿಸಿದ್ದಾನೆ.

ಜಿಯೋ ಮಾಮಿ ಮುಂಬೈ ಚಲನಚಿತ್ರೋತ್ಸವ 2023 ರಲ್ಲಿ ಪ್ರಥಮ ಪ್ರದರ್ಶನ ಕಂಡ “ಮಿಥ್ಯ”, ನಿರ್ದೇಶಕ ಸುಮಂತ್ ಭಟ್ ಅವರ ಚೊಚ್ಚಲ ಚಲನಚಿತ್ರವಾಗಿದೆ. ಚಿತ್ರದ ನಿರೂಪಣೆಯು ಅವರ ವೈಯಕ್ತಿಕ ಅನುಭವವನ್ನು ಆಧರಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಕಾಶ್ ತೂಮಿನಾಡು, ರೂಪಾ ವರ್ಕಾಡಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಚಿತ್ರಕ್ಕೆ ಮಿಧುನ್ ಮುಕುಂದನ್ ಅವರ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಉದಿತ್ ಖುರಾನಾ ಅವರ ಛಾಯಾಗ್ರಹಣ ಮತ್ತು ಶ್ರೀಯಾಂಕ್ ನಂಜಪ್ಪ ಅವರ ಧ್ವನಿ ವಿನ್ಯಾಸವಿದೆ.

 

 

 

LEAVE A REPLY

Please enter your comment!
Please enter your name here