Home ಅಂತರಾಷ್ಟ್ರೀಯ COVID-19 ಸೀಕ್ವಲ್ ಗೆ ಚೀನಾ ತಯಾರಿ? ವುಹಾನ್ ಲ್ಯಾಬ್ ನಲ್ಲಿ HKU5-CoV-2 ಹೊಸ ವೈರಸ್ ಪತ್ತೆ!

COVID-19 ಸೀಕ್ವಲ್ ಗೆ ಚೀನಾ ತಯಾರಿ? ವುಹಾನ್ ಲ್ಯಾಬ್ ನಲ್ಲಿ HKU5-CoV-2 ಹೊಸ ವೈರಸ್ ಪತ್ತೆ!

ಬೀಜಿಂಗ್: COVID-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾದಂತೆಯೇ ಪ್ರಾಣಿಯಿಂದ ಮನುಷ್ಯನಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಬ್ಯಾಟ್ ಕರೋನವೈರಸ್ ಅನ್ನು ಚೀನಾದಲ್ಲಿ ಕಂಡುಹಿಡಿಯಲಾಗಿದೆ ಎಂದು ವರದಿಯಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, HKU5-CoV-2 ಎಂಬ ಹೊಸ ವೈರಸ್ ಅನ್ನು ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಕಂಡುಹಿಡಿದಿದೆ. ಈ ಸುದ್ದಿಯಿಂದ ಜಗತ್ತು ತಲ್ಲಣಗೊಂಡಿದೆ.

ಬ್ಯಾಟ್ ವುಮನ್ ಎಂದೇ ಕರೆಯಲ್ಪಡುವ ಶಿ ಝೆಂಗ್ಲಿ ಎಂಬ ವಿಜ್ಞಾನಿಯು COVID-19ಗೆ ಕಾರಣವಾದ ಇದೇ ವುಹಾನ್ ಲ್ಯಾಬ್ ನಲ್ಲಿ ಸುದೀರ್ಘಾವಧಿಯಿಂದ ವೈರಸ್ ಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ. ಹೊಸ ವೈರಸ್ SARS CoV-2 ಗೆ ಹೋಲಿಕೆಯನ್ನು ಹೊಂದಿದೆ ಎಂದು ಚೀನಾದ ಸಂಶೋಧಕರು ಕಂಡುಕೊಂಡಿದ್ದಾರೆ – ಇದು ಕೋವಿಡ್ ಸಾಂಕ್ರಾಮಿಕಕ್ಕೆ ಕಾರಣವಾದ ವೈರಸ್ ನಂತೆಯೇ ಇದ್ದು ಮತ್ತೊಮ್ಮೆ ಮಹಾಮಾರಿ ಸಾಂಕ್ರಾಮಿಕ ಹರಡುವ ಭೀತಿ ಎದುರಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

HKU5-CoV-2 ಎಂಬುದು ಮೆರ್ಬೆಕೊವೈರಸ್ ಉಪಕುಲಕ್ಕೆ ಸೇರಿದ ಕರೋನವೈರಸ್ ಆಗಿದೆ, ಇದು ಮಧ್ಯಪ್ರಾಚ್ಯ ಉಸಿರಾಟದ ರೋಗ (MERS) ಕ್ಕೆ ಕಾರಣವಾಗುವ ವೈರಸ್ ಅನ್ನು ಸಹ ಒಳಗೊಂಡಿದೆ. ಹೊಸ ವೈರಸ್ ಮಾನವ ACE2 ಗೆ ಬಂಧಿಸುತ್ತದೆ, ಇದು SARS-CoV-2 ಮತ್ತು NL63 (ಸಾಮಾನ್ಯ ಶೀತ ವೈರಸ್) ಗೆ ಹೋಲುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಪ್ರಯೋಗಾಲಯ ಪರೀಕ್ಷೆಯ ಸಮಯದಲ್ಲಿ, ವಿಜ್ಞಾನಿಗಳು ಬಳಸಿದಮಾನವನ ಚಿಕ್ಕ ಅಂಗಾಂಶ ಮಾದರಿಗಳಲ್ಲಿ HKU5-CoV-2 ಮಾನವ ಜೀವಕೋಶದ ಸಂಸ್ಕೃತಿಗಳಿಗೆ ಸೋಂಕು ತರಲು ಸಮರ್ಥವಾಗಿದೆ ಎಂದು ತಂಡವು ಕಂಡುಹಿಡಿದಿದೆ.

ಈ ಅಧ್ಯಯನಕ್ಕೆ ಜಗತ್ತಿನಾದ್ಯಂತ ಋಣಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚೀನಾ ಹೊಸ ಜಾಗತಿಕ ಸಾಂಕ್ರಾಮಿಕವನ್ನು ಹುಟ್ಟು ಹಾಕುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಮಿನ್ನೇಸೋಟ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗ ತಜ್ಞ ಡಾ ಮೈಕೆಲ್ ಓಸ್ಟರ್‌ಹೋಮ್,ಇದನ್ನು ತಳ್ಳಿಹಾಕಿದ್ದಾರೆ ಮತ್ತು ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದಿದ್ದಾರೆ. ಸಾರ್ವಜನಿಕರಲ್ಲಿ ಇದೇ ಮಾದರಿಯ ಸಾರ್ಸ್ ವೈರಸ್ ಗಳಿಗೆ ಪ್ರತಿರೋಧಕತೆ ಉಂಟಾಗಿದ್ದು, ಹೊಸ ತಳಿಯಿಂದ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಆದರೆ ಚೀನಾದ ಕುತಂತ್ರಗಳ ಬಗ್ಗೆ ಮಾಹಿತಿ ಇರುವ ಜಾಗತಿಕ ತಜ್ಞರು ಹೊಸ ತಳಿಯಿಂದ ಅಪಾಯದ ಸಾಧ್ಯತೆ ಇದೆ ಎನ್ನುವುದನ್ನು ಒತ್ತಿ ಹೇಳುತ್ತಿದ್ದಾರೆ.

 

 

 
Previous articleಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಿ: ಪುಸ್ತಕಮೇಳದಲ್ಲಿ ಮು.ಮಂ ಸಿದ್ದರಾಮಯ್ಯ ಕರೆ
Next articleಐಸಿಸಿ ಚಾಂಪಿಯನ್ಸ್ ಟ್ರೋಫಿ 2025: ರೋಹಿತ್ ಗೆ ವಿಶಾಂತ್ರಿ; ಶುಭಮನ್ ಗೆ ನಾಯಕತ್ವ?