
ಪುತ್ತೂರು: ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನ, ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ ನಂದನಬಿತ್ತಿಲ್ ಗೆಜ್ಜೆಗಿರಿ ಕ್ಷೇತ್ರದಲ್ಲಿ ಭಾನುವಾರ ದೇಯಿ ಬೈದ್ಯೆತಿ ಅಮ್ಮನವರ ಮಡಿಲು ತುಂಬಿಸುವ ಕಾರ್ಯಕ್ರಮ ನಡೆಯಿತು.
ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಕ್ಷೇತ್ರದ ಸತ್ಯಧರ್ಮ ಚಾವಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರು ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿದರು.
ಮೂಡುಬಿದಿರೆಯ ಶಿವಾನಂದ ತಂತ್ರಿ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಧ್ವಜಾರೋಹಣ, ಮಧ್ಯಾಹ್ನ 12 ಗಂಟೆಯಿಂದ ಅಮ್ಮನ ಮಡಿಲ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಕೆ.ಬಿ., ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕೋಶಾಧಿಕಾರಿ ಮೋಹನದಾಸ್ ವಾಮಂಜೂರು, ಕಾರ್ಯದರ್ಶಿಗಳಾದ ಜಯವಿಕ್ರಮ್ ಕಲ್ಲಾಪು, ಸಂತೋಚ್‌ಕುಮಾರ್, ಪ್ರಮುಖರಾದ ಎನ್.ಟಿ.ಪೂಜಾರಿ, ಪ್ರಮಲ್ ಕುಮಾರ್, ರಾಜೇಂದ್ರ ಚಿಲಿಂಬಿ, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ಗಂಗಾಧರ ಅಮೀನ್ ಮುಂಬೈ, ಸುಜಿತ ಬಂಗೇರ, ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಶಂಕರಪುರ, ಹರಿಶ್ಚಂದ್ರ ಅಮೀನ್, ಹರೀಶ್ ಕೆ.ಪೂಜಾರಿ, ನಿತ್ಯಾನಂದ ನಾವರ, ವಿದ್ಯಾ ರಾಕೇಶ್, ಉಷಾ ಅಂಚನ್ ನೆಲ್ಯಾಡಿ, ಅಜಿತ್ ಪಾಲೇರಿ, ನಾರಾಯಣ ಮಚ್ಚಿನ, ಗೀತಾ ಪ್ರಕಾಶ್, ಅಶೋಕ್ ಪೂಜಾರಿ ಪಡ್ಪು, ಕರುಣಾಕರ ಸುವರ್ಣ ಉಪ್ಪಿನಂಗಡಿ, ಮಾಧವ ಪೂಜಾರಿ ವಿಟ್ಲ, ವರದರಾಜ್ ಎಂ., ಸುಧಾಕರ ಪೂಜಾರಿ ಕೇಪು, ಶಶಿಧರ ಕಿನ್ನಿಮಜಲು, ಆನಂದ ಪೂಜಾರಿ ಸರ್ವೆದೋಳ, ವಿಶ್ವಜಿತ್ ಅಮ್ಮುಂಜ, ಅಶೋಕ್‌ಕುಮಾರ್ ಪಡ್ಪು, ಎಲ್ಯಣ್ಣ ಪೂಜಾರಿ ಮೈರುಂಡ, ಪದ್ಮನಾಭ ಪೂಜಾರಿ ಅಳಿಕೆ, ಮೋಹನ್ ಗುರ್ಜಿನಡ್ಕ, ವಿನೋದ್ ಕುಂಡಡ್ಕ ಭಾಗವಹಿಸಿದ್ದರು.
ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವರಮಾಧುರ್ಯ ಸಂಗೀತ ಬಳಗದ ಸಾರಥ್ಯದಲ್ಲಿ ಪ್ರಜ್ಞಾ ಮತ್ತು ಅಜಿತ್‌ಕುಮಾರ್ ಗೋಳಿತೊಟ್ಟು ಅವರ ನಿರ್ಮಾಣ, ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು ಅವರ ಸಾಹಿತ್ಯ, ಕಾವ್ಯಶ್ರೀ ಗಡಿಯಾರ ಮತ್ತು ಸೋನಿಕಾ ಜನಾರ್ದನ್ ಅವರ ಕಂಠದಲ್ಲಿ ಮೂಡಿ ಬಂದಿರುವ ಗೆಜ್ಜೆಗಿರಿ ಕ್ಷೇತ್ರ ಕುರಿತ ‘ಗೆಜ್ಜೆಗಿರಿತ ಅಮರ್ ಬೊಳ್ಳಿಲು’ ತುಳು ವಿಡಿಯೊ ಆಲ್ಬಂ ಹಾಡನ್ನು ಬಿಡುಗಡೆ ಮಾಡಿದರು.
ಮುಖಂಡ ಸಂಜೀವ ಮಠಂದೂರು, ಕ್ಷೇತ್ರಾಡಳಿತ ಸಮಿತಿಯ ಪ್ರಮುಖರು ಭಾಗವಹಿಸಿದ್ದರು.
