
ಪುತ್ತೂರು: ಕಂಬಳದ ಅಭಿಮಾನಿಗಳು ಇರುವವರೆಗೆ ಕಂಬಳ ನಿಲ್ಲುವುದಿಲ್ಲ. ಪ್ರಾಣಿ ದಯಾ ಸಂಘ (ಪೆಟಾ)ದವರು ಸುಪ್ರಿಂಕೋರ್ಟ್ಗೂ ಹೋಗಲಿ, ಯಾವುದೇ ಕಸರತ್ತು ಮಾಡಲಿ, ಕಂಬಳ ನಿಲ್ಲಿಸಲು ಸಾಧ್ಯವಿಲ್ಲ. ಅವರು ನಮ್ಮ ಸುದ್ದಿಗೆ ಬರುವುದೂ ಬೇಡ. ನಾವು ಶಿವಮೊಗ್ಗ, ಮುಂಬೈ, ಚೆನ್ನೈ, ಸಾಧ್ಯವಾದರೆ ದುಬೈನಲ್ಲೂ ಕಂಬಳ ಮಾಡುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ 32ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ಷ ಕಳೆದಂತೆ ಕಂಬಳದ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಈ ನಡುವೆ ಪೆಟಾದವರು ವ್ಯವಸ್ಥಿತ ಕಂಬಳದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆದರೆ, ನಾನು ಈ ಕುರಿತು ಸುಪ್ರಿಂಕೋರ್ಟ್ಗೆ ಮನವರಿಕೆ ಮಾಡಿದ್ದೇನೆ. ಪ್ರರಿ ಕಂಬಳಕ್ಕೆ ಸರ್ಕಾರದಿಂದ ₹ 5 ಲಕ್ಷ ತೆಗೆಸಿಕೊಟ್ಟಿದ್ದೇನೆ ಎಂದರು.
ಪ್ರಮುಖರಾದ ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಧಾರಾವಾಹಿ ನಟ ಗಗನ್ ಚಿನ್ನಪ್ಪ, ನಟಿ ಕಾರುಣ್ಯ ರಾಮ್, ಶಕುಂತಳಾ ಶೆಟ್ಟಿ, ನರಸಿಂಹ ಕಾಮತ್, ದಯಾನಂದ ರೈ ಕೋರ್ಮಂಡ, ಪ್ರೇಮನಾಥ ಶೆಟ್ಟಿ ಕಾವು, ಎನ್.ಚಂದ್ರಹಾಸ ಶೆಟ್ಟಿ, ವಸಂತ ಕುಮಾರ್ ರೈ ಉಗ್ಗಳ, ದಿನೇಶ್ ಪಿ.ವಿ., ಈಶ್ವರ ಭಟ್ ಪಂಜಿಗುಡ್ಡೆ, ಶಿವರಾಮ ಆಳ್ವ, ಯೋಗೀಶ್ ಸಾಮಾನಿ ಸಂಪಿಗೆದಡಿ, ಶಿವನಾಥ ರೈ ಮೇಗಿನಗುತ್ತು, ಕೃಷ್ಣಪ್ರಸಾದ್ ಆಳ್ಳ, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಜೀವಂಧರ್ ಜೈನ್, ರಾಕೇಶ್ ರೈ ಕೆಡೆಂಜಿ, ಸೀತಾರಾಮ ರೈ ಕೆದಂಬಾಡಿಗುತ್ತು, ಎಸ್.ಎನ್.ಮನ್ಮಥ, ಕರುಣಾಕರ ಶೆಟ್ಟಿ, ತಾರಾನಾಥ ಶೆಟ್ಟಿ, ರಾಜೀವ ಶೆಟ್ಟಿ ಭಾಗವಹಿಸಿದ್ದರು.
ನಿರಂಜನ ರೈ ಮಠಂತಬೆಟ್ಟು, ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.
