Home ಸುದ್ದಿಗಳು ರಾಷ್ಟ್ರೀಯ “ವಂತಾರಾ” ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

“ವಂತಾರಾ” ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

0
“ವಂತಾರಾ” ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

ಅಹಮದಾಬಾದ್: ಗುಜರಾತ್‌ನ ಜಾಮ್ ನಗರದಲ್ಲಿರುವ ಅನಂತ್ ಅಂಬಾನಿ ಮಾಲಿಕತ್ವದ “ವಂತಾರಾ” ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ದೇಶದ ಅತಿದೊಡ್ಡ ವನ್ಯಜೀವಿ ರಕ್ಷಣಾ ಕೇಂದ್ರ ಇದಾಗಿದ್ದು, ಕೇಂದ್ರದಲ್ಲಿ 2,000 ಕ್ಕೂ ಹೆಚ್ಚು ವಿವಿಧ ಜಾತಿಯ 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಿದೆ. ಅಳಿವಿನಂಚಿನಲ್ಲಿರುವ ಮತ್ತು ತೊಂದರೆಯಲ್ಲಿರುವ ಪ್ರಾಣಿಗಳ ರಕ್ಷಣೆ ಮತ್ತು ಪೋಷಣೆ ಇಲ್ಲಿ ನಡೆಯುತ್ತದೆ.

ವಂತಾರಾದಲ್ಲಿ ಪ್ರಾಣಿಗಳಿಗೆಂದೇ ಎಂಆರ್‌ಐ, ಸಿಟಿ ಸ್ಕ್ಯಾನ್ ಮತ್ತು ಐಸಿಯು ಇರುವ ಆಧುನಿಕ ಆಸ್ಪತ್ರೆ ಇದೆ. ಇಲ್ಲಿ ಪ್ರಾಣಿಗಳಿಗೆ ಅರಿವಳಿಕೆ ಚಿಕಿತ್ಸೆ, ಹೃದಯ ಸಮಸ್ಯೆ, ಮೂತ್ರಪಿಂಡ ಸಮಸ್ಯೆ, ಎಂಡೋಸ್ಕೋಪಿ, ದಂತ ಚಿಕಿತ್ಸೆ ಮತ್ತು ಒಳಾಂಗಗಳ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನೂ ನೀಡಲಾಗುತ್ತದೆ.

ಪ್ರಧಾನಿ ಮೋದಿ ಇದಕ್ಕೂ ಮುನ್ನ ಗಿರ್ ರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ್ದು, ಇದೀಗ ವಂತಾರಾ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಾಣಿಗಳ ಜೊತೆ ಸಮಯಕಳೆದಿದ್ದಾರೆ.

 

 

 

LEAVE A REPLY

Please enter your comment!
Please enter your name here