Home ಕರ್ನಾಟಕ ಕರಾವಳಿ ಮಂಗಳೂರು ಶಕ್ತಿನಗರ ಭಜನಾ ಮಂದಿರದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ವಾಗ್ವಾದ: ಎಫ್‌ಐಆರ್ ದಾಖಲು

ಮಂಗಳೂರು ಶಕ್ತಿನಗರ ಭಜನಾ ಮಂದಿರದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ವಾಗ್ವಾದ: ಎಫ್‌ಐಆರ್ ದಾಖಲು

0
ಮಂಗಳೂರು ಶಕ್ತಿನಗರ ಭಜನಾ ಮಂದಿರದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ವಾಗ್ವಾದ: ಎಫ್‌ಐಆರ್ ದಾಖಲು

ಮಂಗಳೂರು: ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮತ್ತು ಇತರ 11 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಶಕ್ತಿನಗರ ಬಳಿಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಾನುವಾರ ತಡರಾತ್ರಿ (ಮಾರ್ಚ್ 2) ನಡೆದ ವಾಗ್ವಾದವು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಯಿತು. ಕಾಂಗ್ರೆಸ್ ಕಾರ್ಯಕರ್ತ ಯಶವಂತ್ ಪ್ರಭು ಸಲ್ಲಿಸಿದ ದೂರಿನ ಪ್ರಕಾರ, ಬ್ರಹ್ಮ ಕಲಶೋತ್ಸವ ಸಮಾರಂಭದಲ್ಲಿ ದೇವಸ್ಥಾನದಲ್ಲಿ ತಮ್ಮ ಉಪಸ್ಥಿತಿಯನ್ನು ವೇದವ್ಯಾಸ್ ಕಾಮತ್ ಪ್ರಶ್ನಿಸಿದಾಗ ವಾಗ್ವಾದ ಪ್ರಾರಂಭವಾಯಿತು.

“ದೇವಸ್ಥಾನಗಳಿಗೆ ಕಲ್ಲು ಎಸೆದ ಮೇಲೆ ನಿಮಗೆ ಇಲ್ಲಿ ಏನು ಕೆಲಸ?” ಎನ್ನುವ ಕಾಮತ್ ಅವರ ಹೇಳಿಕೆಯನ್ನು ಪ್ರಭು ರಾಜಕೀಯ ಪ್ರೇರಿತವೆಂದು ಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು, ಬಿಜೆಪಿ ಕಾರ್ಯಕರ್ತರಾದ ಅಶ್ವಿತ್ ಕೊಟ್ಟಾರಿ, ಮಣಿ ಮತ್ತು ಜಯಪ್ರಕಾಶ್ ಸೇರಿದಂತೆ ಗುಂಪೊಂದು ಯಶವಂತ್ ಮೇಲೆ ಹಲ್ಲೆ ನಡೆಸಿ, ಅವರ ಅಂಗಿಯನ್ನು ಹರಿದು ಹಾಕಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದರ ವಿರುದ್ದ ಬಿಜೆಪಿ ನಾಯಕ ಮಣಿ ಆರ್ ಪ್ರತಿದೂರು ದಾಖಲಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪರಿಶಿಷ್ಟ ಜಾತಿ ಸಮುದಾಯದ ಬಿಜೆಪಿ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ವಕ್ತಾರ ರಾಜ್ ಗೋಪಾಲ್ ರೈ ಕಾಮತ್ ವಿರುದ್ದದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ನಾಯಕರನ್ನು ಗುರಿಯಾಗಿಸಲು ಕಾಂಗ್ರೆಸ್ ಸುಳ್ಳು ಆರೋಪವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಎರಡೂ ಪಕ್ಷಗಳ ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

 

 

 

 

 

LEAVE A REPLY

Please enter your comment!
Please enter your name here