Home ಕರ್ನಾಟಕ ಕರಾವಳಿ ಶಿರಿಬೀಡು-ಕಲ್ಸಂಕ ರಸ್ತೆ ನೋ ಪಾರ್ಕಿಂಗ್ ಝೋನ್: ವಾಹನ ಪಾರ್ಕ್ ಮಾಡಿದಲ್ಲಿ ದಂಡ

ಶಿರಿಬೀಡು-ಕಲ್ಸಂಕ ರಸ್ತೆ ನೋ ಪಾರ್ಕಿಂಗ್ ಝೋನ್: ವಾಹನ ಪಾರ್ಕ್ ಮಾಡಿದಲ್ಲಿ ದಂಡ

0
ಶಿರಿಬೀಡು-ಕಲ್ಸಂಕ ರಸ್ತೆ ನೋ ಪಾರ್ಕಿಂಗ್ ಝೋನ್: ವಾಹನ ಪಾರ್ಕ್ ಮಾಡಿದಲ್ಲಿ ದಂಡ

ಉಡುಪಿ: ಉಡುಪಿ ನಗರದಲ್ಲಿ ದಿನೇ ದಿನೇ ಸಂಚಾರದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರಿಂಡ ಪಾದಾಚಾರಿಗಳಿಗೆ ಮತ್ತು ಇತರ ವಾಹನ ಸವಾರರಿಗೆ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಇದೀಗ ಶಿರಿಬೀಡು-ಕಲ್ಸಂಕ ರಸ್ತೆಯನ್ನು ನೋ ಪಾರ್ಕಿಂಗ್ ಝೋನ್ ಮಾಡಲಾಗಿದೆ.

ಶಿರಿಬೀಡು-ಕಲ್ಸಂಕ ರಸ್ತೆಯಲ್ಲಿ ಬ್ಯಾರಿಕೇಡ್ ಮತ್ತು ಟೇಪ್ ಅಳವಡಿಸಲಾಗಿದ್ದು, ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಈ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ. ಶಿರಿಬೀಡು-ಕಲ್ಸಂಕ ಮಧ್ಯೆ ಇಬ್ಬರು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದ್ದು, ಬೆಳಗ್ಗೆ ಹಾಗೂ ಸಂಜೆಯ ವೇಳೆ ಇಲ್ಲಿ ಕಾರ್ಯಾಚರಣೆ ಮಾಡುತ್ತಾರೆ. ಪೊಲೀಸರ ಈ ಕ್ರಮದಿಂದಾಗಿ ರಸ್ತೆ ಬದಿ ಇರುವ ಅಂಗಡಿ ಮಾಲೀಕರಿಗೆ ತೊಂದರೆ ಉಂಟಾಗುತ್ತಿದೆ ಎನ್ನುವ ದೂರು ಕೇಳಿಬಂದಿದೆ.

 

 

 

LEAVE A REPLY

Please enter your comment!
Please enter your name here