Home ಸುದ್ದಿಗಳು ರಾಜ್ಯ ಕರ್ನಾಟಕ ಬಜೆಟ್ 2025-26: ತುಷ್ಟೀಕರಣದ ಉತ್ತುಂಗ; ಪರಿಶಿಷ್ಟರ ಕಡೆಗಣಿಸಿದ ಬಜೆಟ್ ಎಂದ ಬಿಜೆಪಿ

ಕರ್ನಾಟಕ ಬಜೆಟ್ 2025-26: ತುಷ್ಟೀಕರಣದ ಉತ್ತುಂಗ; ಪರಿಶಿಷ್ಟರ ಕಡೆಗಣಿಸಿದ ಬಜೆಟ್ ಎಂದ ಬಿಜೆಪಿ

0
ಕರ್ನಾಟಕ ಬಜೆಟ್ 2025-26: ತುಷ್ಟೀಕರಣದ ಉತ್ತುಂಗ; ಪರಿಶಿಷ್ಟರ ಕಡೆಗಣಿಸಿದ ಬಜೆಟ್ ಎಂದ ಬಿಜೆಪಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಸತ್ ನಲ್ಲಿ ಕರ್ನಾಟಕ ಬಜೆಟ್ 2025-26 ಅನ್ನು ಮಂಡಿಸಿದ್ದು, ಇದು ಮುಸ್ಲಿಂ ತುಷ್ಟೀಕರದ ಉತ್ತುಂಗದ ‘ಹಲಾಲಾ ಬಜೆಟ್’ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.

ಬಜೆಟ್ ಭಾಷಣ ಮಾಡಿರುವ ಸಿಎಂ, ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಕೈಗಾರಿಕಾ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ 1 2ಎ ಜತೆ 2ಬಿ (ಮುಸ್ಲಿಂ) ಗೆ ಶೇಕಡಾ 20 ರಷ್ಟು ಮೀಸಲಾತಿ ನೀಡಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಏನೇನು?

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ
ಮುಸ್ಲಿಂ ಸರಳ ವಿವಾಹಗಳಿಗೆ ₹50,000 ನೆರವು
ವಕ್ಫ್ ಆಸ್ತಿಗಳು ಮತ್ತು ಸ್ಮಶಾನಗಳ ಮೂಲಸೌಕರ್ಯ ಅಭಿವೃದ್ಧಿಗೆ ₹150 ಕೋಟಿ
ಮುಸ್ಲಿಂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹50 ಲಕ್ಷ
ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹೊಸ ಐಟಿಐ ಕಾಲೇಜು ಸ್ಥಾಪನೆ
ಕೆಇಎ ಅಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ 50% ಶುಲ್ಕ ರಿಯಾಯಿತಿ
ಉಳ್ಳಾಲ ಪಟ್ಟಣದ ಮುಸ್ಲಿಂ ಹುಡುಗಿಯರಿಗೆ ವಸತಿ ಪಿಯು ಕಾಲೇಜು
ಮುಸ್ಲಿಂ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ವಿದೇಶಿ ವಿದ್ಯಾರ್ಥಿವೇತನ 20 ರಿಂದ 30 ಲಕ್ಷಕ್ಕೆ ಏರಿಕೆ
ಬೆಂಗಳೂರಿನ ಹಜ್ ಭವನದ ವಿಸ್ತರಣೆ ಹೆಚ್ಚುವರಿ ಕಟ್ಟಡಗಳು
ಮುಸ್ಲಿಂ ಹುಡುಗಿಯರಿಗೆ ಆತ್ಮರಕ್ಷಣಾ ತರಬೇತಿ

ಮು.ಮಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಮುಸ್ಲಿಂ ತುಷ್ಟೀಕರಣ ಮಿತಿ ಮೀರಿದೆ ಮತ್ತು ಪ.ಜಾ/ಪ.ಪಂಗಡದವರನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ಕಿಡಿಕಾರಿದೆ.

 

 

LEAVE A REPLY

Please enter your comment!
Please enter your name here