Home ಕರ್ನಾಟಕ ಕರಾವಳಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮ

ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮ

0
ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮ

ಮಣಿಪಾಲ: ಇಲ್ಲಿನ ಕಾರ್ನಿಕದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಸಿರಿಸಿಂಗಾರ ನೇಮದ ಪ್ರಯುಕ್ತ ಶನಿವಾರ ಪಲ್ಲಪೂಜೆ, ಮಹಾಅನ್ನಸಂತರ್ಪಣೆ ಹಾಗೂ ನೇಮ ಜರುಗಿತು.

ದೈವಸ್ಥಾನದ ಆಡಳಿತ ಮೊಕ್ತೇಸರ ಟಿ. ಅಶೋಕ್‌ ಪೈ ಮತ್ತು ಗಾಯತ್ರಿ ಪೈ ದಂಪತಿ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಪಲ್ಲಪೂಜೆ ನಡೆಯಿತು.

ಬೆಸ್ಟ್‌ ಸೆಲ್ಲರ್ಸ್‌ ಸಂಸ್ಥೆಯ ಎಂಡಿ ಸಚಿನ್‌ ಎ. ಪೈ ಮತ್ತು ದೀಪಾಲಿ ಪೈ ದಂಪತಿ, ಮಾಹೆ ವಿ.ವಿ. ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಡಾ| ತಲ್ಲೂರು ಶಿವರಾಮ ಶೆಟ್ಟಿ, ದೈವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮತ್ತು ಶಕುಂತಳಾ ಶ್ರೀನಿವಾಸ ದಂಪತಿ, ಗುರಿಕಾರ ನಾರಾಯಣ ಕೆ., ವೈಷ್ಣವದುರ್ಗ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಜ ಹೆಗ್ಡೆ, ಪ್ರಮುಖರಾದ ಸತ್ಯಜಿತ್‌ ಸುರತ್ಕಲ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಂಜೆ ಭಂಡಾರ ಮೆರವಣಿಗೆ, ರಾತ್ರಿ 9ಕ್ಕೆ ನೇಮ ಆರಂಭಗೊಂಡಿತು. ಮಾ.9ರಂದು ದಿನವಿಡೀ ವಿವಿಧ ದೈವಗಳ ನೇಮ ನಡೆದು, ರಾತ್ರಿ 10 ಗಂಟೆಗೆ ದೈವದ ಭಂಡಾರ ದೈವಸ್ಥಾನಕ್ಕೆ ಹಿಂದಿರುಗಲಿದೆ.

 

 

 

LEAVE A REPLY

Please enter your comment!
Please enter your name here