Home ಸುದ್ದಿಗಳು ರಾಷ್ಟ್ರೀಯ ‘ಛಾವಾ’ ಚಿತ್ರದ ಚಿನ್ನದ ಬೇಟೆ: ಆಸಿರ್‌ಗಢ ಕೋಟೆಯಲ್ಲಿ ನೆಲ ಅಗೆಯುತ್ತಿರುವ ಜನ

‘ಛಾವಾ’ ಚಿತ್ರದ ಚಿನ್ನದ ಬೇಟೆ: ಆಸಿರ್‌ಗಢ ಕೋಟೆಯಲ್ಲಿ ನೆಲ ಅಗೆಯುತ್ತಿರುವ ಜನ

0
‘ಛಾವಾ’ ಚಿತ್ರದ ಚಿನ್ನದ ಬೇಟೆ: ಆಸಿರ್‌ಗಢ ಕೋಟೆಯಲ್ಲಿ ನೆಲ ಅಗೆಯುತ್ತಿರುವ ಜನ

ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್‌ಪುರದ ಆಸಿರ್‌ಗಢ ಕೋಟೆಯಲ್ಲಿ ಟಾರ್ಚ್ ದೀಪಗಳು, ಜರಡಿಗಳು ಮತ್ತು ಲೋಹ ಶೋಧಕಗಳನ್ನು ಹಿಡಿದುಕೊಂಡು ಹಲವಾರು ಸ್ಥಳೀಯರು ಜಮಾಯಿಸಿದ್ದು, ಕೋಟೆಯಲ್ಲಿರಬಹುದಾದ ಚಿನ್ನದ ಬೇಟೆಯಲ್ಲಿ ತೊಡಗಿರುವ ವರದಿಗಳು ಕೇಳಿಬಂದಿವೆ. ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಚಿತ್ರದಲ್ಲಿ ಬುರ್ಹಾನ್‌ಪುರವನ್ನು ಚಿನ್ನದ ಗಣಿ ಎಂದು ಉಲ್ಲೇಖಿಸಿದ ದೃಶ್ಯವು ಅಗೆತಕ್ಕೆ ಕಾರಣ ಎನ್ನಲಾಗುತ್ತಿದೆ.

ಇಲ್ಲಿನ ದರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತೊಡಗಿದ್ದ ಜೆಸಿಬಿ ಯಂತ್ರದಿಂದ ಮಣ್ಣನ್ನು ಅಗೆದು ತೆಗೆದ ನಂತರ ಅದನ್ನು ಸ್ಥಳೀಯ ಗ್ರಾಮಸ್ಥರಾದ ಹರೂನ್ ಶೇಖ್ ಅವರ ಹೊಲದಲ್ಲಿ ಸುರಿಯಲಾಗಿತ್ತು.ಅದರಲ್ಲಿ ಕಾರ್ಮಿಕರಿಗೆ ಪ್ರಾಚೀನ ಕಾಲದ ಲೋಹದ ನಾಣ್ಯ ದೊರೆತಿದೆ ಎಂದು ಸುದ್ದಿ ಹಬ್ಬಿದೆ. ಮೊಘಲ್ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ ಎಂದು ಸುದ್ದಿಯಾಗಿದೆ. ಈ ಸುದ್ದಿ ಕೇಳಿದ್ದೇ ತಡ, ಹತ್ತಿರದ ಹಳ್ಳಿಗಳಿಂದ ಜನರು ಚಿನ್ನವನ್ನು ಹುಡುಕುವ ನಿಮಿತ್ತ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಕೆಲವರಿಗೆ ನಿಜವಾಗಿಯೂ ಚಿನ್ನದ ನಾಣ್ಯಗಳು ದೊರೆತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಜಿಲ್ಲಾಡಳಿತವು ಇನ್ನೂ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ಛಾವಾ ಚಿತ್ರದಲ್ಲಿ ಬುರ್ಹಾನ್‌ಪುರದಲ್ಲಿ ಚಿನ್ನದ ಗಣಿ ಇತ್ತೆನ್ನುವ ಉಲ್ಲೇಖದಿಂದಾಗಿ ಜನರು ಕೋಟೆಗೆ ಬರುತ್ತಿದ್ದು, ರಾತ್ರಿಯೆಲ್ಲಾ ಚಿನ್ನದ ಬೇಟೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.

 

 

 

LEAVE A REPLY

Please enter your comment!
Please enter your name here