Home ಆರೋಗ್ಯ ಹಸಿ ಮೊಟ್ಟೆ ತಿಂದ್ರೆ ಎದುರಾಗುತ್ತೆ ಈ ಎಲ್ಲಾ ಸಮಸ್ಯೆಗಳು

ಹಸಿ ಮೊಟ್ಟೆ ತಿಂದ್ರೆ ಎದುರಾಗುತ್ತೆ ಈ ಎಲ್ಲಾ ಸಮಸ್ಯೆಗಳು

0
ಹಸಿ ಮೊಟ್ಟೆ ತಿಂದ್ರೆ ಎದುರಾಗುತ್ತೆ ಈ ಎಲ್ಲಾ ಸಮಸ್ಯೆಗಳು

ಮೊಟ್ಟೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಆಹಾರ ಪದಾರ್ಥ. ಚಿಕ್ಕ ಮಕ್ಕಳು ಕೂಡ ಬಹಳ ಇಷ್ಟಪಟ್ಟು ತಿನ್ನುವ ಈ ಮೊಟ್ಟೆಯಲ್ಲಿ ಅನೇಕ ರೀತಿಯ ಪೌಷ್ಟಿಕಾಂಶಗಳು ಅಡಗಿವೆ. ಕೆಲವರು ಮೊಟ್ಟೆಯನ್ನು ಬೇಯಿಸಿ ತಿಂದರೆ, ಇನ್ನೂ ಕೆಲವರು ಹಾಫ್ ಬಾಯಿಲ್ಡ್ ಮಾಡಿ ತಿನ್ನುತ್ತಾರೆ. ಇನ್ನೂ ಕೆಲವರು ಹಸಿ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ. ಹಸಿಮೊಟ್ಟೆಯು ಶೇ.10ರಷ್ಟು ಪ್ರೋಟಿನ್ ಮತ್ತು ಶೇ.90ರಷ್ಟು ನೀರನ್ನು ಒಳಗೊಂಡಿರುತ್ತದೆ. ಪೊಟ್ಯಾಷಿಯಂ, ಮ್ಯಾಗ್ನೀಷಿಯಂ ನಿಯಾಸಿನ್ ಮತ್ತು ಸೋಡಿಯಮ್‌ನಂತಹ ಹಲವಾರು ಪೋಷಕಾಂಶಗಳು ಮೊಟ್ಟೆಯಲ್ಲಿವೆ. ಮೊಟ್ಟೆಯಲ್ಲಿಯ ಹಳದಿ ಭಾಗವು ವಿಟಾಮಿನ್ಗಳು, ಕಬ್ಬಿಣ,ಸತುವು ಮತ್ತು ರಂಜಕದಂತಹ ಪೋಷಕಾಂಶಗಳನ್ನು ಒಳಗೊಂಡಿದೆ.

ಮೊಟ್ಟೆಯಲ್ಲಿರುವ ಹಲವಾರು ಪೋಷಕಾಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ನೀವು ಮೊಟ್ಟೆಗಳನ್ನು ಬೇಯಿಸಿ ತಿನ್ನಿ ಅಥವಾ ಆಮ್ಲೆಟ್ ಮಾಡಿಕೊಂಡು ತಿನ್ನಿ, ಆದರೆ ಮೊಟ್ಟೆಯನ್ನು ಹಸಿಯಾಗಿ ತಿನ್ನುವುದು ಮಾತ್ರ ಶರೀರದ ಮೇಲೆ ಹಲವಾರು ದುಷ್ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ. ಹಸಿಮೊಟ್ಟೆಯ ಸೇವನೆಯಿಂದ ಹಲವಾರು ವಿಧದ ಅಲರ್ಜಿಗಳು ಮತ್ತು ಸಮಸ್ಯೆಗಳು ಶರೀರದಲ್ಲಿ ಕಾಣಿಸಿಕೊಳ್ಳುತ್ತವೆ. ಕೊಬ್ಬುಮುಕ್ತವಾಗಿದ್ದು,ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿದ್ದರೂ ಹಸಿಮೊಟ್ಟೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇಲ್ಲಿವೆ ಹಸಿ ಮೊಟ್ಟೆಯ ಬಿಳಿಭಾಗವನ್ನು ಸೇವಿಸುವುದರಿಂದ ಅನೇಕ ಅಡ್ಡಪರಿಣಾಮಗಳಿವೆ. ಅವುಗಳೆಂದರೆ, ಅಲರ್ಜಿಯನ್ನು ಹೆಚ್ಚಿಸುತ್ತದೆ, ಸ್ನಾಯು ನೋವನ್ನುಂಟು ಮಾಡಬಹುದು, ಮೂತ್ರಪಿಂಡಗಳಿಗೆ ಹಾನಿಕಾರಕವಾಗಿದೆ.

 

LEAVE A REPLY

Please enter your comment!
Please enter your name here