Home ಸುದ್ದಿಗಳು ರಾಷ್ಟ್ರೀಯ ಹುಬ್ಬಳ್ಳಿಯ ಬಡ ವಿದ್ಯಾರ್ಥಿಯ ಓದಿಗೆ ಸಹಾಯ ಮಾಡಿದ ಕೆಎಲ್‌ ರಾಹುಲ್

ಹುಬ್ಬಳ್ಳಿಯ ಬಡ ವಿದ್ಯಾರ್ಥಿಯ ಓದಿಗೆ ಸಹಾಯ ಮಾಡಿದ ಕೆಎಲ್‌ ರಾಹುಲ್

0
ಹುಬ್ಬಳ್ಳಿಯ ಬಡ ವಿದ್ಯಾರ್ಥಿಯ ಓದಿಗೆ ಸಹಾಯ ಮಾಡಿದ ಕೆಎಲ್‌ ರಾಹುಲ್

ನವದೆಹಲಿ: ಸಾಮಾನ್ಯ ಜನರು ಸಹಾಯಹಸ್ತ ಚಾಚಿದಾಗ ಅನೇಕ ಸೆಲಿಬ್ರೆಟಿಗಳು ಸಹಾಯ ಮಾಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ. ಇದೀಗ ಕ್ರಿಕೇಟಿಗರೋರ್ವರು ಬಡ ವಿದ್ಯಾರ್ಥಿಯೋರ್ವರಿಗೆ ಸಹಾಯ ಮಾಡಿದ್ದಾರೆ.
ಹೌದು, ಮೂಲತಃ ಕರ್ನಾಟಕದವರಾದ ಕೆಎಲ್‌ ರಾಹುಲ್‌ ಹುಬ್ಬಳ್ಳಿಯ ಬಡ ವಿದ್ಯಾಥಿಯೋವರಿಗೆ ಸಹಾಯ ಮಾಡಿದ್ದಾರೆ.

ಬಡತನವಿದ್ದರೂ ಕೂಡ ಕಷ್ಟಪಟ್ಟು ಓದಿ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 571ಅಂಕಗಳಿಸುವ ಮೂಲಕ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಹುಬ್ಬಳ್ಳಿಯ ಅಮೃತ ಮಾವಿನಕಟ್ಟೆ ಎನ್ನುವ ವಿದ್ಯಾರ್ಥಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ಕೆಎಲ್‌ಇ ಕಾಲೇಜಿನಲ್ಲಿ ಬಿಕಾಂ ಜೊತೆಗೆ ಸಿಎ ಕೋರ್ಸ್ ಮಾಡುವ ಹಂಬಲ ಹೊಂದಿದ್ದ ಈ ವಿದ್ಯಾರ್ಥಿ‌ ಸ್ನೇಹಿತನ ಮುಖಾಂತರ ಕೆಎಲ್‌ ರಾಹುಲ್‌ ಅವರನ್ನು ಸಂಪರ್ಕಿಸಿ ಆರ್ಥಿಕ ಸಹಾಯವನ್ನು ಕೇಳುತ್ತಾರೆ. ಇದಕ್ಕೆ ಮಿಡಿದ ಕೆಎಲ್‌ ರಾಹುಲ್‌ 75ಸಾವಿರ ಹಣವನ್ನು ವಿದ್ಯಾರ್ಥಿಗೆ ನೀಡುವುದರ ಜೊತೆಗೆ ಮುಂದಿನ ಮೂರು ವಷದ ಶುಲ್ಕವನ್ನು ಕೂಡ ಭರಿಸುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಉತ್ತಮ ಅಂಕಗಳೊಂದಿಗೆ ಈ ಕೋರ್ಸ್ ಪೂಣಗೊಳಿಸಿದರೆ ರಾಹುಲ್‌ ಅವರನ್ನು ಭೇಟಿಯಾಗುವ ಅವಕಾಶವೂ ಕೂಡ ಈ ವಿದ್ಯಾಥಿಗೆ ಸಿಕ್ಕಿದೆ. ಈ ಹಿನ್ನೆಲೆ ತಮಗೆ ಸಹಾಯ ಮಾಡಿದ ಕೆಎಲ್‌ ರಾಹುಲ್‌ ಅವರಿಗೆ ಅಮೃತ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

 

LEAVE A REPLY

Please enter your comment!
Please enter your name here