Home ನಮ್ಮ ಬಗ್ಗೆ

ನಮ್ಮ ಬಗ್ಗೆ

ನ್ಯೂಸ್‌ ಪ್ರಸಾರ.. ರಾಜ್ಯದ ಆಗು-ಹೋಗುಗಳ ಸುದ್ದಿ, ಪ್ರಸಕ್ತ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ಮನರಂಜನೆ, ಕ್ರೀಡೆ, ಸುದ್ದಿ ವಿಶ್ಲೇಷಣೆ ಹೀಗೆ ಎಲ್ಲಾ ಸ್ಥರಗಳ ಸುದ್ದಿ ಮಾಹಿತಿಗಾಗಿ ಹುಟ್ಟಿಕೊಂಡ ಸುದ್ದಿ ಜಾಲತಾಣವಿದು…. ರಾಜ್ಯದ ಪ್ರಮುಖ ಸುದ್ದಿಗಳು ಕರಾವಳಿಯ ಕ್ಷಣ ಕ್ಷಣದ ಸುದ್ದಿ, ರಾಜ್ಯದ ರಾಜಕಾರಣ, ಪತ್ರಿಕೋದ್ಯಮದ ಮೌಲ್ಯಗಳು ಹಾಗೂ ಬದ್ಧತೆಯ ಜೊತೆಗೆ ಯಾವುದೇ, ಯಾರದೇ ದಾಸ್ಯಕ್ಕೆ ಒಳಗಾಗದೇ ವಸ್ತುನಿಷ್ಟ ವರದಿ ಪ್ರಸಾರ ಮಾಡಲು ನ್ಯೂಸ್‌ ಪ್ರಸಾರ ವೆಬ್‌ ಸೈಟ್‌ ಬದ್ಧವಿದೆ. ಸಾಮಾಜಿಕ ಕಳಕಳಿ, ನೊಂದವರಿಗೆ ಧ್ವನಿಯಾಗುವ ಉದ್ದೇಶ‌ದ ಜೊತೆಗೆ ಸಿನಿಮಾ, ಮನರಂಜನೆ, ವೈರಲ್‌ ಸುದ್ದಿಗಳು, ವಿಜ್ಞಾನ ಲೋಕದ ಕೌತುಕಗಳು, ತಂತ್ರಜ್ಞಾನ ಹೀಗೆ ಎಲ್ಲಾ ಸ್ಥರಗಳ ಸುದ್ದಿಗಳನ್ನು ನೀವು ನಿರೀಕ್ಷಿಸಬಹುದು.

ಯಾವುದೇ ಆತುರಕ್ಕೊಳಗಾಗಿ ವೇಗಾವಾಗಿ ಸುದ್ದಿ ತಲುಪಬೇಕೆನ್ನುವ ದೃಷ್ಟಿಯಿಂದ ಸುಳ್ಳು ಅಥವಾ ಅಸಂಬದ್ದ ಸುದ್ದಿಗಳು ಇಲ್ಲಿ ಪ್ರಸಾರವಾಗದು. ವಿಮರ್ಶೆಗೆ ಒಳಪಟ್ಟ ಸುದ್ದಿಗಳಿಗೇ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ಸುದ್ದಿಗಳಿಗೆ ನ್ಯೂಸ್ ಪ್ರಸಾರದಲ್ಲಿ ಮಹತ್ವ ನೀಡಲಾಗುವುದಿಲ್ಲ. ಸಾಮಾಜಿಕ ಜವಾಬ್ದಾರಿಯಳ್ಳ ವಿವಿಧ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ, ಸಮಾಜಿಕ ಬದ್ಧತೆ ಜವಾಬ್ದಾರಿಯಿಂದ ಯುವ ಪತ್ರಕರ್ತರೇ ಕಟ್ಟಿ ಬೆಳೆಸುತ್ತಿರುವ ಸಂಸ್ಥೆ ನ್ಯೂಸ್ ಪ್ರಸಾರ..