
ನವದೆಹಲಿ: ವಯೋಸಹಜ ಕಾಯಿಲೆಯಿಂದ ಬಳುಲುತ್ತಿದ್ದ ಬಾಲಿವುಡ್ ನ ಹಿರಿಯ ನಟಿ ಸುಲೋಚನಾ ಲಾತ್ಕರ್(94) ಅವರು ಕೊನೆಯುಸಿರೆಳೆದಿದ್ದಾರೆ. ಮುಂಬೈನ ಸುಶ್ರುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡ್ಲಕಟ್ ಗ್ರಾಮದವರಾದ ನಟಿ ಸುಲೋಚನಾ ಲಾತ್ಕರ್ ಅವರು 1946ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗೈದಿರುವ ಈ ನಟಿ ಕಾಲಕ್ರಮೇಣ ತಾಯಿಯ ಪಾತ್ರದಲ್ಲಿ ಬಹಳ ಉತ್ತಮವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಲ್ಲದೇ ತಮ್ಮ ಅದ್ಭತ ನಟನೆಗೆ ಅನೇಕ ಪ್ರಶಸ್ತಿಗಳನ್ನೂ ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದರು. ಇದೀಗ ನಟಿಯ ಸಾವಿನ ವಿಚಾರ ತಿಳಿದು ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಿನಿ ರಂಗದ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
