ಪಡುಬಿದ್ರಿ: ಹಿಂದಿ ಚಿತ್ರಗಳ ನಟಿ ಶಿಲ್ಪಾ ಶೆಟ್ಟಿ ಇಲ್ಲಿನ ಬಹು ಪ್ರಸಿದ್ದ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರದಂದು ದೇವಸ್ಥಾನದಲ್ಲಿ ನಡೆಯಲಿರುವ ಢಕ್ಕೆ ಬಲಿ ಸೇವೆಗೆ ಮುಂಚಿತವಾಗಿ, ಪಂಚಾಮೃತ ಅಭಿಷೇಕದಲ್ಲಿ ಪಾಲ್ಗೊಳ್ಳಲು ನಟಿ ತನ್ನ ಕುಟುಂಬದೊಂದಿಗೆ ಬೆಳಿಗ್ಗೆ ಆಗಮಿಸಿದ್ದರು.
ಗುರುವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.
ನಿಡ್ಡೋಡಿಯ ಮುದಲಾಡಿಯಲ್ಲಿರುವ ತಮ್ಮ ಕುಟುಂಬದ ದೈವಗಳ ಮನೆಗೆ ಭೇಟಿ ನೀಡಲು ಬಂದ ಸಂದರ್ಭದಲ್ಲಿ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಪ್ರತೀ ಭಾರಿ ಮನೆಗೆ ಭೇಟಿ ನೀಡುವ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಅಂತೆಯೇ ಈ ಬಾರಿಯೂ ನಟಿ ತನ್ನ ಮಕ್ಕಳು, ತಾಯಿ ಸುನಂದಾ ಶೆಟ್ಟಿ ಮತ್ತು ತಂಗಿ ಶಮಿತಾ ಶೆಟ್ಟಿಯೊಂದಿಗೆ ದೇವಿಯ ದರ್ಶನ ಪಡೆದಿದ್ದಾರೆ.
