Home ಸಿನೆಮಾ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ಚಿಕ್ಕಣ್ಣನಿಗೆ ಪೊಲೀಸ್‌ ನೋಟಿಸ್‌ ಜಾರಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ಚಿಕ್ಕಣ್ಣನಿಗೆ ಪೊಲೀಸ್‌ ನೋಟಿಸ್‌ ಜಾರಿ

0
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ಚಿಕ್ಕಣ್ಣನಿಗೆ ಪೊಲೀಸ್‌ ನೋಟಿಸ್‌ ಜಾರಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌, ಪವಿತ್ರಾ ಗೌಡ ಸೇರಿ 17ಮಂದಿಯನ್ನು ಅರೆಸ್ಟ್‌ ಮಾಡಲಾಗಿದೆ. ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದ್ದು, ತನಿಖೆಯಿಂದಾಗಿ ಕೊಲೆಯ ಕರಾಳತೆ ಒಂದೊಂದಾಗಿ ಹೊರಬರುತ್ತಿದೆ. ಇದೀಗ ಕೊಲೆ ಕೇಸ್‌ ಗೆ ಸಂಬಂಧಿಸಿದಂತೆ ನಟ ಚಿಕ್ಕಣ್ಣನಿಗೂ ಕೂಡ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ವಿಭಾಗದ ಪೊಲೀಸರು ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಹೌದು, ನಟ ದರ್ಶನ್‌ ಕೊಲೆ ನಡೆದಿದ್ದ ಶೆಡ್‌ ಗೆ ಹೋಗುವುದಕ್ಕೂ ಮುನ್ನ ಒಂದು ಪಾರ್ಟಿ ನಡೆಸಿದ್ದರು. ಈ ಪಾರ್ಟಿಯಲ್ಲಿ ದರ್ಶನ್‌ ಜೊತೆಯಲ್ಲಿ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು ಎನ್ನಲಾಗಿದ್ದು, ಒಂದೊಂಮ್ಮೆ ಪಾರ್ಟಿಯಲ್ಲಿ ಏನಾದರೂ ರೇಣುಕಾಸ್ವಾಮಿ ವಿಚಾರವಾಗಿ ಚರ್ಚೆ ನಡೆದಿತ್ತಾ ಎನ್ನುವ ವಿಚಾರವನ್ನು ತಿಳಿದುಕೊಳ್ಳುವ ಹಿನ್ನೆಲೆ ಚಿಕ್ಕಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಇನ್ನು, ರೇಣುಕಾಸ್ವಾಮಿ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಒಟ್ಟು 17ಮಂದಿಯನ್ನು ಅರೆಸ್ಟ್‌ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಕೂಡ ಬಹಳ ಬಿರುಸಾಗಿ ಮಾಡಲಾಗುತ್ತಿದೆ. ಕೆದಕಿದಷ್ಟು ಬಹಳ ಇಂಟ್ರಸ್ಟಿಂಗ್‌ ವಿಚಾರಗಳು ಹೊರಬರುತ್ತಿವೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕರೆಂಟ್‌ ಶಾಕ್‌ ಕೊಟ್ಟು ಬಹಳ ಕ್ರೂರವಾಗಿ ಹತ್ಯಗೈದಿದ್ದಾರೆ ಎನ್ನಲಾಗಿದೆ

 

LEAVE A REPLY

Please enter your comment!
Please enter your name here