
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ, ಕೊನೆಗೂ ಬಾಸ್ ಅಭಿಮಾನಿಗಳು ಬಹಳಷ್ಟು ಖುಷಿಯಾಗಿದ್ದಾರೆ. ಡಿ.29 ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹವಾ ನೀಡಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರದರ್ಶನಗಳನ್ನು ಕಾಣುತ್ತಿದೆ. ಹೌದು ಕಾಟೇರ ಸಿನಿಮಾದ ವೀಕ್ಷಣೆ ಮಾಡಿದ ಪ್ರೇಕ್ಷಕರು ಇದು ದರ್ಶನ್ ದಿ ಬೆಸ್ಟ್ ಸಿನಿಮಾ ಎಂದು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಜ್ಯಾದ್ಯಂತ ಈಗಾಗಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ಸ್ವಾಗತಿಸಿದ್ದಾರೆ.
ಚಿತ್ರದ ಕಥೆಯೇನು?
ರಾಬರ್ಟ್ ಚಿತ್ರದ ಬಳಿಕ ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಜೊತೆಯಾಗಿ ಮಾಡಿದ ಚಿತ್ರ ಕಾಟೇರ. ದರ್ಶನ್ ಆರಾಧನಾ ರಾಮ್ ನಟನೆಯ ಈ ಚಿತ್ರ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಳ್ಳಿಗಾಡಿನ ಗೇಣಿದಾರ ರೈತರ ಕಥೆಯನ್ನು ಸಿನಿಮಾ ಮೂಲಕ ತೆರೆ ಮೇಲೆ ತಂದಿದ್ದಾರೆ. 1970ರ ಸಮಯದಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು ಸಿನಿ ಪ್ರೀಯರು ಈ ವಿಭಿನ್ನ ಕಥೆಗೆ ಫಿದಾ ಆಗಿದ್ದಾರೆ. ಅದೇ ರೀತಿ ಖಳನಟರಾಗಿ ಜಗಪತಿ ಬಾಬು ಮತ್ತು ವಿನೋದ್ ಆಳ್ವಾ ನಟಿಸಿದ್ದಾರೆ.
ದಾಖಲೆ ಸೃಷ್ಟಿಸಿದೆ
ಈ ಸಿನಿಮಾ ತೆರೆಕಂಡಿರುವುದು ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ. ಹೊರರಾಜ್ಯ, ವಿದೇಶಗಳಲ್ಲಿಯೂ ಕೂಡ ಕನ್ನಡ ವರ್ಷನ್ ಅನ್ನೇ ಪ್ರದರ್ಶನ ಮಾಡಲಾಗುತ್ತಿದ್ದು ಇನ್ನೇನು 100 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಲು ಸಿದ್ದವಾಗಿದೆ. ಈಗಾಗಲೇ 4 ದಿನದಲ್ಲಿ ಕಾಟೇರ ಸಿನಿಮಾ ಸುಮಾರು 77 ಕೋಟಿ ರೂಪಾಯಿಗೂ ಹೆಚ್ಚು ಹಣಗಳಿಕೆ ಮಾಡಿದೆ.
ಉತ್ತಮ ಸಂದೇಶ
ಕಾಟೇರ ಸಿನಿಮಾಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಶೇಷತೆಗಳನ್ನು ನಾವು ನೋಡಬಹುದಾಗಿದೆ. ಜೊತೆಗೆ ಉತ್ತಮ ಸಾಮಾಜಿಕ ಸಂದೇಶವು ಇದೆ.ನೊಂದವರ,ಶೋಷಿತರ ಪರ ಇತುವ ಅತ್ಯುತ್ತಮ ಚಿತ್ರ ಎಂದು ಕಾಟೇರ, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಚಿತ್ರದಲ್ಲಿ ಮಾಲಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿ. ಇನ್ನೂ ಶೃತಿ, ಕುಮಾರ್ ಗೋವಿಂದ್, ಬಿರಾದಾರ್, ಅವಿನಾಶ್, ಸೇರಿದಂತೆ ಅನೇಕ ಹಿರಿಯ ಕಲಾವಿದರು ಚಿತ್ರದಲ್ಲಿ ಇದ್ದಾರೆ.
