Home ಸಿನೆಮಾ ಸಪ್ತಪದಿ ತುಳಿದ ನಟ ಡಾಲಿ ಧನಂಜಯ್- ಡಾ. ಧನ್ಯತಾ

ಸಪ್ತಪದಿ ತುಳಿದ ನಟ ಡಾಲಿ ಧನಂಜಯ್- ಡಾ. ಧನ್ಯತಾ

ಮೈಸೂರು: ಕನ್ನಡ ಚಲನಚಿತ್ರ ನಟ ಡಾಲಿ ಧನಂಜಯ್ ತಮ್ಮ ಸ್ನೇಹಿತೆ ಡಾ. ಧನ್ಯತಾ ಜೊತೆ ಭಾನುವಾರ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಡಾಲಿ ಧನಂಜಯ್ ಅವರು ಚಿತ್ರದುರ್ಗದ ವೈದ್ಯೆ ಧನ್ಯತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಲಾವಿದ ಅರುಣ್ ಸಾಗರ್ ನಿರ್ಮಿಸಿದ ಸೆಟ್ ನಲ್ಲಿ ವಿವಾಹದ ವಿಧಿವಿಧಾನಗಳು ನೆರವೇರಿದೆ. ದೇವಸ್ಥಾನದ ಥೀಮ್​ನಲ್ಲಿ ವಿವಾಹ ಮಂಟಪವನ್ನು ರಚಿಸಲಾಗಿದೆ. ಶಿವ-ಪಾರ್ವತಿ ದೇವರ ವಿಗ್ರಹಗಳನ್ನು ಇರಿಸಲಾಗಿದೆ.

ಇಂದು ಬೆಳಗ್ಗೆ ಮುಹೂರ್ತ ಧಾರೆ ಕಾರ್ಯಕ್ರಮಗಳು ನೆರವೇರಿದ್ದು ಸಿನಿಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ರಾಜಕಾರಣಿಗಳು ಹಾಗೂ ಇತರ ಗಣ್ಯರು ವಿವಾಹ ಸಮಾರಂಭಕ್ಕೆ ಆಗಮಿಸಿ ದಂಪತಿಗಳಿಗೆ ಶುಭಕೋರಿದ್ದಾರೆ.

 

 

 
Previous articleನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಕನಿಷ್ಟ 15 ಸಾವು; ಹಲವರಿಗೆ ಗಾಯ
Next articleಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಜಾರಿ ಸಮರ್ಪಕವಾಗಿರಲಿ: ಕೋಟ ಶ್ರೀನಿವಾಸ್ ಪೂಜಾರಿ