ಬೆಂಗಳೂರು: ಕ್ರಿಯೆಟಿವಿಟಿ ಅಂದಾಕ್ಷಣ ನೆನಪಾಗೋದೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಒಂದು ಸಿನಿಮಾದ ಕಥೆಯನ್ನು ವಿಭಿನ್ನವಾಗಿ ಪ್ರೇಕ್ಷಕರ ಮನಮುಟ್ಟುವಂತೆ ತೋರಿಸುವ ಇವರ ಅನೇಕ ಸಿನಿಮಾ ಸಖತ್ ಹಿಟ್ ಆಗಿವೆ. ಅದ್ಭುತ ನಟನೆ ಹಾಗೂ ನಿದೇಶನದ ಮೂಲಕ ಜನಮನ ಗೆದ್ದಿರುವ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಇವರ ಹುಟ್ಟುಹಬ್ಬ ಸೆಲಿಬ್ರೆಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಜುನ್ 6 1983ರಲ್ಲಿ ಉಡುಪಿಯಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಪದವಿ ಪಡೆದು ಬಳಿಕ ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೂ ಕೂಡ ಕೆಲಸ ಮಾಡಿದ್ದರು. ತದ ನಂತರ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅವರು ಅನೇಕ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು. ಕ್ರಮೇಣ ನಟರಾಗಿ, ನಿರ್ದೇಶಕರಾಗಿ ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಇವರು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಇನ್ನು, ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಈಗಾಗಲೇ ಶೂಟಿಂಗ್ ಮುಗಿಸಿರುವ ಬಹು ನಿರೀಕ್ಷಿತ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಅಪ್ಡೇಟ್ ದೊರಕಿದ್ದು, ಈ ಸಿನಿಮಾ ಎರಡು ಪಾರ್ಟ್ ನಲ್ಲಿ ರಿಲೀಸ್ ಆಗುತ್ತಿದೆ ಎನ್ನುವ ವಿಚಾರವನ್ನು ರಕ್ಷಿತ್ ಶೆಟ್ಟಿ ಬಹಿರಂಗ ಪಡಿಸಿದ್ದಾರೆ. ಆ ಮೂಲಕ ಸಿನಿ ಪ್ರೇಕ್ಷಕರ ನಿರೀಕ್ಷೆ ಇನ್ನಷ್ಟು ದುಪ್ಪಟ್ಟಾಗಿದೆ.
