Home ಅಂಕಣ ಮಕ್ಕಳ ನೆನಪಿನ ಶಕ್ತಿಗೆ ಬಾದಾಮಿ ರಾಮಬಾಣ

ಮಕ್ಕಳ ನೆನಪಿನ ಶಕ್ತಿಗೆ ಬಾದಾಮಿ ರಾಮಬಾಣ

ಚಿಕ್ಕ ಮಕ್ಕಳಿಗೆ ಸಾಮಾನ್ಯವಾಗಿ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಅದು ಒದುವ ವಿಚಾರದಲ್ಲಂತೂ ಮರೆವು ಹೆಚ್ಚಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಓದಲು ಹೇಳಿರುವುದು, ಹೋಮ್ ವರ್ಕ್ ಕೊಟ್ಟಿರುವುದನ್ನು ಮರೆತು ಮರುದಿನ ಹೋಗಿ ಟೀಚರ್ ಕಡೆಯಿಂದ ಬೈಗುಳವನ್ನು ತಿನ್ನುತ್ತಾರೆ. ಇತ್ತ ಕಡೆ ಮನೆಯವರಿಂದನೂ ಬೈಗುಳವನ್ನು ತಿನ್ನುತ್ತಿರುತ್ತಾರೆ. ಹೀಗಾಗಿ ಈ ಮರೆವಿನ ಸಮಸ್ಯೆಯನ್ನು ನಿವಾರಸಲು ತಾಯಿಯಾದವಳು ಸಾಕಷ್ಟು ಪ್ರಯತ್ನಿಸುತ್ತಾಳೆ. ಈ ರೀತಿಯ ಸಮಸ್ಯೆ ಇದ್ದಲ್ಲಿ ಕೆಲವೊಂದು ಮನೆಮದ್ದನ್ನು ಉಪಯೋಗಿಸುವುದು ಬಹಳ ಒಳ್ಳೆಯದು.


ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು : 30 ಗ್ರಾಂ ಸುಲಿದ ಬಾದಾಮಿ, 30 ಗ್ರಾಂ ಗಸಗಸೆ, 14 ಗ್ರಾಂ ಏಲಕ್ಕಿ ಪುಡಿ, 1750 ಮಿಲಿಗ್ರಾಂ ಸ್ವರ್ಣ ಭಸ್ಮ.
ತಯಾರಿಸುವ ವಿಧಾನ : ಮೊದಲು ಬಾದಾಮಿ, ಗಸಗಸೆ, ಏಲಕ್ಕಿಯನ್ನು ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ಸ್ವರ್ಣ ಭಸ್ಮವನ್ನು ಹಾಕಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ. ಒಂದು ದಿನದ ನಂತ್ರ ಸೇವನೆ ಶುರುಮಾಡಿ. ಬೆಳಿಗ್ಗೆ ಹಾಗೂ ಸಂಜೆ 2-2 ಗ್ರಾಂ ಬೆಣ್ಣೆ ಮತ್ತು ಸಕ್ಕರೆ ಜೊತೆ ಸೇವನೆ ಮಾಡಲು ಕೊಡಿ. ಇದರಿಂದ ಮಕ್ಕಳ ಮರೆವಿನ ಖಾಯಿಲೆ ದೂರವಾಗಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

 
Previous articleಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಎಫೆಕ್ಟ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
Next articleಕಾಪು ಮಾರಿಗುಡಿ ದೇವಸ್ಥಾನಕ್ಕೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಶಾನಂದ ಭೇಟಿ