
ಇಂದು ಮೊಬೈಲ್ ಬಂದ ಮೇಲೆ ಎಲ್ಲ ಕೆಲಸಗಳು ಮೊಬೈಲ್ ಮೂಲಕವೇ ಪುರ್ಣಗೊಳಿಸುತ್ತೇವೆ. ಅದರಲ್ಲೂ ಯುಪಿಐ ಸೇವೆ ನಮ್ಮ ದೈನಂದಿನ ದಿನನಿತ್ಯದ ಬದುಕಿನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು, ಸಾಕಷ್ಟು ಬದಲಾವಣೆ ಕಂಡುಕೊಳ್ಳಲಾಗಿದೆ. ಯುಪಿಐ ನ ಮೂಲಕ ವಹಿವಾಟಿಗೂ ಕೆಲ ನಿರ್ದಿಷ್ಟ ನಿಯಮಗಳನ್ನು ಜಾರಿಗೆ ಮಾಡಿದ್ದು, ವಹಿವಾಟುಗಳನ್ನು ಮಾಡುವಾಗ ಸಹ ನಿರ್ದಿಷ್ಟ ಮಿತಿ ಇರುತ್ತದೆ. ಹೀಗಾಗಿ ಈ ಬಗ್ಗೆ ಕೆಲವು ವಿಚಾರಗಳನ್ನು ಸಹ ನಾವು ತಿಳಿದು ಕೊಂಡಿರಬೇಕಾಗುತ್ತದೆ.
ಬಳಕೆ ಹೆಚ್ಚಳ
ಇಂದು ಜನರು ಬ್ಯಾಂಕ್ ಗೆ ಹೋಗಿ ಸಾಲು ಗಟ್ಟಿ ನಿಲ್ಲುವ ಸಂಖ್ಯೆ ಕಡಿಮೆಯಾಗಿದೆ. ಇದ್ದ ಸ್ಥಳದಲ್ಲೆ ಹಣ ಪಾವತಿ, ಕ್ರೆಡಿಟ್, ಡೆಬಿಟ್ ಮಾಡಿಕೊಳ್ಳುತ್ತಾರೆ. ಯುಪಿಐನ ವ್ಯವಹಾರ ಸಕ್ರಿಯಗೊಳಿಸುವ ಕಾರಣ ಸಾಕಷ್ಟು ಸುಲಭ ವಿಧಾನ ತರಲಾಗಿದ್ದು, ಯುಪಿಐ ವ್ಯವಹಾರಗಳಿಗೆ ಒಂದು ನಿರ್ದಿಷ್ಟ ಮಿತಿ ಇದ್ದ ಕಾರಣ ಅದಕ್ಕಿಂತ ಹೆಚ್ಚು ಹಣ ತೆಗೆದು ಕೊಳ್ಳಬೇಕಾದರೆ ಕೆಲ ನಿರ್ದಿಷ್ಟ ಕ್ರಮ ಅನುಸರಿಸಬೇಕು.
ನಿಮ್ಮ ಓಟಿಪಿ ನಂಬರ್ ಹಂಚಿಕೊಳ್ಳದಿರಿ
ನೀವು ಯಾವುದೇ ಟ್ರಾನ್ಸ್ ಆ್ಯಕ್ಷನ್ ಮಾಡುವುದಾದರೂ ನಿಮ್ಮ ಯುಪಿಐ ನಂಬರ್, ಓಟಿಪಿ ನಂಬರ್ ಕುರಿತಾಗಿ ಜಾಗೂರಕರಾಗಿ ಇರುವುದು ಬಹಳ ಮುಖ್ಯ. ಇತರರೊಂದಿಗೆ ಯಾವುದೇ ಮಾಹಿತಿ ಹಂಚಿಕೊಳ್ಳದಿರಿ.
ಸರ್ವರ್ ಸಮಸ್ಯೆ
ಖಾತೆಯಲ್ಲಿ ಹಣ ಇದ್ದರೂ ಕೂಡ ಕೆಲವೊಮ್ಮೆ ಬ್ಯಾಂಕಿನ ಸರ್ವರ್ ಸಮಸ್ಯೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಹಣದ ಅವಶ್ಯಕತೆ ಇದ್ದಾಗ ಏನು ಮಾಡಬಹುದು? ನೀವು ಒಂದು ಖಾತೆಗೆ ಯುಪಿಐ ಬಳಸಿದ್ದರೂ ಯುಪಿಐ ಅನ್ನು ಒಂದಕ್ಕಿಂತ ಹೆಚ್ಚು ಬ್ಯಾಂಕಿಗೆ ಲಿಂಕ್ ಮಾಡುವ ಮೂಲಕ ಮತ್ತೊಂದು ಬ್ಯಾಂಕಿನಿಂದ ಹಣ ಪಡೆಯಬಹುದು.
ಪಾಸ್ ವರ್ಡ್ ಕಾಳಜಿ
ಯುಪಿಐ ವ್ಯವಹಾರದಲ್ಲಿ ಹಣ ಟ್ರಾನ್ಸ್ ಫರ್ ಮಾಡುವಾಗ ಪಾಸ್ ವರ್ಡ್ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಕೆಲವೊಮ್ಮೆ ಯುಪಿಐ ಪಾಸ್ ವರ್ಡ್ ಮರೆತು ಹೋಗುತ್ತದೆ. ಹಲವು ಪಾಸ್ ವರ್ಡ್ ನಡುವೆ ನಿಮ್ಮ ಆನ್ಲೈನ್ ಟ್ರಾನ್ಸ್ ಫರ್ ಪಾಸ್ ವರ್ಡ್ ಮರೆತು ಹೋದರು ಯುಪಿಐನ ಮೂಲಕ ಹೊಸ ಪಾಸ್ ವರ್ಡ್ ಅನ್ನು ರೀ ಸೆಟ್ ಮಾಡಿಕೊಳ್ಳಬಹುದು. ಆದ್ದರಿಂದ ದಿನ ನಿತ್ಯ ಬಳಕೆ ಮಾಡುವ ಯುಪಿಐ ಪಾಸ್ ವರ್ಡ್ ಗಳ ಬಗ್ಗೆ ಯು ನೀವು ತಿಳಿದು ಕೊಂಡಿರಬೇಕು.
