Home ಅಂಕಣ ಕಾರು ಅಪಘಾತ ಪತ್ತೆ ಹಚ್ಚಲು ವಿನೂತನ ವ್ಯವಸ್ಥೆ

ಕಾರು ಅಪಘಾತ ಪತ್ತೆ ಹಚ್ಚಲು ವಿನೂತನ ವ್ಯವಸ್ಥೆ

ಬದಲಾದ ಈ ಆಧುನಿಕ ಕಾಲಘಟ್ಟದಲ್ಲಿ ಎಲ್ಲ ವಿಚಾರದಲ್ಲಿ ಮನುಷ್ಯ ತುಂಬಾನೆ ಅಪ್ ಗ್ರೇಡ್ ಆಗುತ್ತಿದ್ದಾನೆ. ಇಂದು ನಮಗೆ ಯಾವ ಒಂದು ಸಣ್ಣ ಮಾಹಿತಿ ಬೇಕಾದರೂ ಸರ್ಚ್ ಇಂಜಿನ್ ಮೊರೆಹೋಗುತ್ತಿದ್ದೇವೆ. ಅದೇ ರೀತಿ ಈಗ ವ್ಯವಸ್ಥೆ ಜಟೀಲವಾಗದೇ ಸುಲಭ ವಿಧಾನ ಕಂಡುಕೊಳ್ಳಲಾಗುತ್ತಿದೆ. ಹಳ್ಳಿಗಳು ಸೇರಿದಂತೆ ನಗರ ಪ್ರದೇಶದಲ್ಲಿ ಅಪಘಾತ ಸಂಖ್ಯೆ ಏರಿಕೆ ಆಗುತ್ತಿದ್ದು, ಇದನ್ನು ತಡೆಯಲು ವಿನೂತನ ಕ್ರಮ ಒಂದನ್ನು ಪರಿಚಯಿಸಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಗೂಗಲ್ ಮಾಹಿತಿಯನ್ನು ಅನೇಕ ವಿಧದಲ್ಲಿ ನೀಡುತ್ತಿದ್ದು, ಇದೀಗ ಗೂಗಲ್ ಸರ್ಚ್ ಇಂಜಿನ್ ಮೂಲಕ ಅಪಘಾತ ಪತ್ತೆ ಮಾಡಲು ಹೊಸವೈಶಿಷ್ಟ್ಯತೆ ಒಂದನ್ನು ಪರಿಚಯಿಸಿದೆ. ಇದು ನಿಮಗೆ ಅಪಘಾತ ಆದ ಬಳಿಕ ಸಮಸ್ಯೆ ತಡೆಯಲು ಸಾಕಷ್ಟು ಸಹಕಾರಿ ಆಗಲಿದೆ. ಇದನ್ನು ಈ ಹಿಂದೆ ಪರಿಚಯಿಸಲಾಗಿದ್ದರೂ ಅಷ್ಟಾಗಿ ಮಾನ್ಯತೆ ಪಡೆದಿರಲಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಅಘಾತ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಾರ ಸಾವು ನೋವು ಕೂಡ ಆಗಿದ್ದು ಗಮನ ಹರಿಸಿದ್ದ ಅನೇಕ ರಾಷ್ಟ್ರಗಳು ಅಪಘಾತ ತಡೆಯಲು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಚಿಂತಿಸಿದಾಗ ಈ ವಿನೂತನ ಮಾದರಿ ಪುನಃ ಪರಿಷ್ಕರಣೆ ಆಗಿದೆ.

ಪಿಕ್ಸೆಲ್ ಫೋನ್ ಮೂಲಕ ಕಾರ್ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯ ಪರಿಚಯಿಸಲಾಗಿದ್ದು, ಇದರ ಸಹಾಯದಿಂದ ಅಪಘಾತ ನಡೆದರೆ ಕೂಡಲೇ ಸ್ಥಳ ಪರಿಶೀಲನೆ ಆಗಲಿದೆ ಎಂಬ ಸತ್ಯ ಇದೀಗ ತಿಳಿದು ಬಂದಿದೆ. ಅಂದರೆ ಎಷ್ಟೋ ಬಾರಿ ಕಾರು ಅಪಘಾತ ಆಗುವ ಸ್ಥಳದಲ್ಲಿ ಜನ ವಾಸ್ತವ್ಯ ಇರಲಾರದು. ಅಪಘಾತ ಆದವರು ಯಾರಾದರೂ ಸಹಾಯಕ್ಕೆ ಬರಬಹುದಾ ಎಂದು ಕಾದು ಅಸುನೀಗಿದ್ದು ಇದೆ ಹಾಗಾಗಿ ಈ ವ್ಯವಸ್ಥೆ ಸಾಕಷ್ಟು ನೆರವಾಗಲಿದೆ.

 

ಇದರ ಕಾರ್ಯ ವಿಧಾನ ಹೇಗೆ ಇರಲಿದೆ?
ಈ ವ್ಯವಸ್ಥೆಯನ್ನು ವಿಶ್ವದ ಐದು ದೇಶದಲ್ಲಿ ಜಾರಿಗೆ ತರಲಾಗಿದ್ದು, ಸ್ವಿಡ್ಜರ್ ಲ್ಯಾಂಡ್, ಆಸ್ಟ್ರಿಯ , ಬೆಲ್ಜಿಯಂ, ಪೋರ್ಚುಗಲ್, ಭಾರತದಲ್ಲಿ ಪರಿಚಯಿಸಲಾಗಿದೆ. ಇದರ ಕಾರ್ಯ ವಿಧಾನ ನಾವು ಪರಿಶೀಲನೆ ಮಾಡುವುದಾದರೆ ನಿಮ್ಮ ಕಾರು ತಪ್ಪಿ ಅಪಘಾತವಾದರೆ ಆಗ ಈ ವ್ಯವಸ್ಥೆ ನಿಮಗೆ ನೆರವಾಗಲಿದೆ. ಅಂದರೆ ಸ್ವಯಂ ಚಾಲಿತ ವಾಗಿ 112ತುರ್ತು ಸೇವೆಗೆ ನೆರವಾಗಲಿದೆ. ನೀವು ಅಪಘಾತಗೊಂಡ ಸ್ಥಳದ ಬಗ್ಗೆ ಮಾಹಿತಿಯನ್ನು ಕೂಡಲೇ ತಲುಪಿಸಲಿದೆ.

 

ನೀವೇನು ಮಾಡಬೇಕು?
ಇದು ಗೂಗಲ್ ನ ಫಿಕ್ಸೆಲ್ ಫೋನ್ ವೈಶಿಷ್ಟ್ಯ ವಾಗಿದ್ದು, ನಿಮ್ಮ ವೈಯಕ್ತಿಕ ಸುರಕ್ಷತಾ ದೃಷ್ಟಿಯಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಅಪ್ಲಿಕೇಶನ್ ಮೂಲಕ ಕಾರ್ ಕ್ರ್ಯಾಶ್ ಪತ್ತೆ ವೈಶಿಷ್ಟ್ಯ ವನ್ನು ಡ್ರೈವಿಂಗ್ ಇತರ ಅವಧಿಯಲ್ಲಿ ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳಿ. ಆದರೆ ಇದಕ್ಕೆ ನೀವು ಮೊದಲು ಯಾವ ಸ್ಥಳ, ಮೈಕ್ರೊಫೋನ್ ಇನ್ನಿತರ ಮಾಹಿತಿ ಫೀಡಿಂಗ್ ಮಾಡಬೇಕು. ಹೀಗಾಗಿ ಕಾರು ಅಪಘಾತ ಆದಾಗ ಅದರ ಮಾಹಿತಿಯನ್ನು ತಾಂತ್ರಿಕ ಸಹಾಯದಿಂದ ನಿಮಗೆ ಸಾಕಷ್ಟು ಸಹಕಾರಿ ಆಗಲಿದೆ‌.

 
Previous articleಚುರುಕುಗೊಂಡ ಹಿಂಗಾರು: ಬಂಟ್ವಾಳದಲ್ಲಿ ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ
Next articleಜಿಎಸ್ ಟಿ ಎಲ್ಲ ಉದ್ಯಮಕ್ಕೂ ಕಡ್ಡಾಯ ವಿತ್ತ ಸಚಿವರ ಸ್ಪಷ್ಟನೆ