ಭಾರತೀಯ ಹಬ್ಬಗಳಲ್ಲಿ ವಿಶೇಷವಾದ ಹಬ್ಬ ಈ ಗಣೇಶ ಚತುರ್ಥಿ. ಗಣೇಶ ಚತುರ್ಥಿ, ಗಣೇಶನ ಹುಟ್ಟುಹಬ್ಬವನ್ನು ಆಚರಿಸುವ ಭಾರತೀಯ ಹಬ್ಬವಾಗಿದೆ. ಇದನ್ನು ‘ಗಣೇಶ ಚತುರ್ಥಿ’ ಅಥವಾ ‘ಗಣೇಶೋತ್ಸವ’ ಎಂದು ಕರೆಯುತ್ತಾರೆ. ಈ ಹಬ್ಬವು ಹಿಂದೂ ಕ್ಯಾಲೆಂಡರ್‌ನ ಭಾದ್ರಪದ ಮಾಘದ ಚತುರ್ಥಿ ದಿನದಂದು ನಡೆಸಲಾಗುತ್ತದೆ, ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ.
ಗಣೇಶ ಚತುರ್ಥಿಯ ಹಬ್ಬವು ಗಣೇಶನ ಹೆಸರಿನಲ್ಲಿ ಮಾಡಲ್ಪಡುವ ಪ್ರತಿಷ್ಠಾಪನೆಯು, ದೇವರ ಮೇಲಿನ ಭಕ್ತಿ ಹೆಚ್ಚಿಸಲು ಆಚರಿಸುತ್ತಾರೆ. ಈ ದಿನ, ಗಣೇಶನ ಪ್ರತಿಮೆ ಮನೆಯಲ್ಲಿಯೂ ಅಥವಾ ಸಾರ್ವಜನಿಕವಾಗಿ ಪೂಜಿಸುತ್ತಾರೆ. ಗಣೇಶನನ್ನು ನೆನೆಯುವ ಮೂಲಕ, ಸಂಪತ್ತು, ಅರೋಗ್ಯ, ಮತ್ತು ದುಶ್ಚಿಂತನೆಗಳಿಂದ ಮನಸ್ಸು ಮುಕ್ತವಾಗಲಿ ಎಂದು.
ಪೂಜೆಯು ಸಾಮಾನ್ಯವಾಗಿ ಗಣೇಶನಿಗೆ ಪ್ರಿಯವಾದ ಮೋದಕ, ಹಣ್ಣು ಹಂಪಲು ಇತ್ಯಾದಿಗಳನ್ನು ಸಮರ್ಪಣೆ ಮಾಡುವ ಮೂಲಕ ನಡೆಯುತ್ತದೆ. ಹಬ್ಬದ ಅಂತ್ಯದಲ್ಲಿ, ಗಣೇಶನ ಪ್ರತಿಮೆಯನ್ನು ಶುದ್ಧೀಕರಣಕ್ಕಾಗಿ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಗಣೇಶ ಚತುರ್ಥಿ ಹಬ್ಬ ಕೇವಲ ಹಬ್ಬವಲ್ಲ, ಶ್ರದ್ಧೆ, ಭಕ್ತಿ, ಮತ್ತು ಸಮಾನ್ವಯತೆಯ ಪ್ರತೀಕವಾಗಿದೆ.
ಗಣೇಶನ ಕಥೆ ಹಿಂದೂ ಪುರಾಣಗಳಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿದ್ದು, ಗಣೇಶ ಶಿವ ಮತ್ತು ಪಾರ್ವತಿಯ ಪುತ್ರನಾಗಿ ವಿಘ್ನ ನಿವಾರಕನಾಗಿ ವಿರಾಜಮಾನನಾಗಿದ್ದಾನೆ.
ಗಣಪತಿಯ ಕಥೆ ಏನು: ಪಾರ್ವತಿ ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂಗು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿದಳು. ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗ್ರಹದ ಬಾಗಿಲು ಕಾಯಲು ನೇಮಿಸಿದಳು.
ಇದೆ ವೇಳೆ ಕೈಲಾಸಪತಿಯ ಆಗಮನವಾಗುತ್ತೆ. ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ. ಇದೇನು, ಈ ಹುಡುಗ, ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ಶಿವ ಯಾರು ನೀನು? ಎಂದು ಅವನ ಕುರಿತು ಕೇಳುತ್ತಾನೆ. ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲು ಬಿಡಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು ಒಳಹೋಗಲು ಬಿಡುವುದಿಲ್ಲ ಎಂದು ಬಾಲಕ ಶಿವನಿಗೆ ಹೇಳುತ್ತಾನೆ.
ಇದನ್ನು ಕೇಳಿ ರುದ್ರಗಣಗಳು ಸಿಟ್ಟಿನಿಂದ ಅವನ ಮೇಳೆ ಮುಗಿಬೀಳಲು, ಒಬ್ಬೊಬ್ಬರನ್ನು ಥಳಿಸಿ ತನ್ನ ಪರಾಕ್ರಮವನ್ನು ತೋರುತ್ತಾನೆ. ಇದೆಲ್ಲವನ್ನು ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ ಹುಡುಗನ ಉದ್ಧಟತನದಿಂದ ಕ್ರೋಧಿತನಾಗಿ ತನ್ನ ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ.
ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋಧಿಸಲಾರಂಭಿಸಿದಳು. ಗೌರಿಯು ಕ್ಷಣಾರ್ಧದಲ್ಲಿ ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ ಗಾಬರಿಗೊಂಡ ಶಿವ ಪಾರ್ವತಿಯನ್ನು ಸಮಾಧಾನ ಪಡಿಸಲು ಶಿವನು ಬಾಲಕನನ್ನು ಬದುಕಿಸುವದಾಗಿ ಹೇಳಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸಿದನು. ಅಂತೆ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ ಆನೆಯನ್ನು ಶಿರವನ್ನು ಕತ್ತರಿಸಿಕೊಂಡು ತರುತ್ತಾರೆ. ಶಂಕರನು ಆ ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ ಬದುಕಿಸಿದನು.
