
ಮಂಗಳೂರು: ಆತ್ಮಹತ್ಯಗೆ ಶರಣಾಗಿದ್ದ ಮಹೇಶ್ ಮೋಟರ್ಸ್ ನ ಮಾಲಕ ಪ್ರಕಾಶ್ ಶೇಖ ಅವರ ಅಂತ್ಯಕ್ರಿಯೆ ಸೋಮವಾರ ಮಂಗಳೂರಿನ ಶಕ್ತಿ ನಗರ ರುದ್ರಭೂಮಿಯಲ್ಲಿ ನೆರವೇರಿತು.
ಕದ್ರಿಯ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಪ್ರಕಾಶ್ ಶೇಖ ಅವರು ನೇಣಿಗೆ ಶರಣಾಗಿದ್ದರು. ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಪ್ರಕಾಶ್ ಶೇಖ ಅವರ ಶವವನ್ನು ಮನಯವರಿಗೆ ಹಸ್ತಾಂತರ ಮಾಡಲಾಯಿತು. ಪ್ರಕಾಶ್ ಶೇಖ ಅವರ ಅಂತ್ಯಕ್ರಿಯೆಗೂ ಮುನ್ನ ನಡೆದ ಅವರ ಅಂತಿಮ ಯಾತ್ರೆಯಲ್ಲಿ ಮಹೇಶ್ ಮೋಟಸ್‌ನ ಎಲ್ಲಾ 65 ಬಸ್ ಗಳ ಸಿಬ್ಬಂದಿಗಳು ತಮ್ಮ ಬಸ್‌ಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಂತಿಮ ವಿದಾಯ ಸಲ್ಲಿಸಿದರು. ನೂರಾರು ಯುವಕರಿಗೆ ಉದ್ಯೋಗ ನೀಡಿ ಉದ್ಯೋಗದಾತರೆನಿಸಿಕೊಂಡಿದ್ದ ತಮ್ಮ ಮಾಲೀಕನ ಅಗಲುವಿಕೆಗೆ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.
ಪತ್ನಿ ಹಾಗೂ ಪುತ್ರಿಯೊಂದಿಗೆ ಕದ್ರಿ ಅಪಾರ್ಟ್ ಮೆಂಟ್ ನಲ್ಲಿ ಪ್ರಕಾಶ್ ಶೇಖ ಅವರು, ರವಿವಾರ ಬೆಳಿಗ್ಗೆ ತನ್ನ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಮಧ್ಯಾಹ್ನ ಊಟಕ್ಕೂ ಬಾರದೇ ಇರುವುದನ್ನು ಕಂಡು ಪತ್ನಿ ಊಟಕ್ಕೆ ಕರೆಯಲು ಹೋದಾಗ ಬಾಗಿಲು ತೆರೆಯದೇ ಇರುವುದನ್ನು ನೋಡಿ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್ ಶೇಖ ಅವರು ಫ್ಯಾನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
