Home ಕರ್ನಾಟಕ ಕರಾವಳಿ ಯಕ್ಷಗಾನದ ಪ್ರಸಿದ್ಧ ಕಲಾವಿದ ತೋನ್ಸೆ ಜಯಂತ್‌ ಕುಮಾರ್ ನಿಧನ

ಯಕ್ಷಗಾನದ ಪ್ರಸಿದ್ಧ ಕಲಾವಿದ ತೋನ್ಸೆ ಜಯಂತ್‌ ಕುಮಾರ್ ನಿಧನ

0
ಯಕ್ಷಗಾನದ ಪ್ರಸಿದ್ಧ ಕಲಾವಿದ ತೋನ್ಸೆ ಜಯಂತ್‌ ಕುಮಾರ್ ನಿಧನ

ಉಡುಪಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಪ್ರಸಿದ್ಧ ಕಲಾವಿದ ತೋನ್ಸೆ ಜಯಂತ್‌ ಕುಮಾರ್(‌77) ಸೋಮವಾರ ಬೆಳಿಗ್ಗೆ ಅಸುನೀಗಿದ್ದಾರೆ. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಜೀವನದ ಬಹುಪಾಲು ಸಮಯವನ್ನು ರಂಗಸ್ಥಳದಲ್ಲೇ ಕಳೆದಿದ್ದರು.
ಸಂಚಾರಿ ಯಕ್ಷಗಾನ ಭಂಡಾರ ಎಂದೇ ಕರೆಯಲ್ಪಡುತ್ತಿದ್ದ ಇವರಿಗೆ ರಾಷ್ಟ್ರಪತಿ ಗೌರವ ಸ್ವೀಕಾರ, ಅಕಾಡೆಮಿ ಪ್ರಶಸ್ತಿ, ಯಕ್ಷಸುಮ ಪ್ರಶಸ್ತಿ, ಕಾಳಿಂಗ ನಾವುಡ ಪ್ರಶಸ್ತಿ ಲಭಿಸಿದ್ದವು. ನಾಳೆ ಸಂತೆಕಟ್ಟೆಯ ಗೋಪಾಲಪುರದಲ್ಲಿರುವ ತೋನ್ಸೆ ಜಯಂತ್‌ ಕುಮಾರ್‌ ಅವರ ನಿವಾಸದಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿ, ಸಕಲ ಗೌರವಾರ್ಪಣೆಯೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here