Home ಜಿಲ್ಲೆ ಮಹಿಳಾ ಉದ್ಯಮಿಗಳ ವಿಶೇಷ ಕಾರ್ಯಕ್ರಮ “ಪವರ್ ಪರ್ಬ-2025” ಉದ್ಘಾಟನೆ

ಮಹಿಳಾ ಉದ್ಯಮಿಗಳ ವಿಶೇಷ ಕಾರ್ಯಕ್ರಮ “ಪವರ್ ಪರ್ಬ-2025” ಉದ್ಘಾಟನೆ

0
ಮಹಿಳಾ ಉದ್ಯಮಿಗಳ ವಿಶೇಷ ಕಾರ್ಯಕ್ರಮ “ಪವರ್ ಪರ್ಬ-2025” ಉದ್ಘಾಟನೆ

ಉಡುಪಿ: ಮಹಿಳಾ ಉದ್ಯಮಿಗಳ್ಗಾಗಿಯೇ ಹಮ್ಮಿಕೊಳ್ಳಲಾಗುವ ವಿಶೇಷ ಕಾರ್ಯಕ್ರಮ “ಪವರ್ ಪರ್ಬ-2025” ಅನ್ನು ಪ್ರಗತಿಪರ ರೈತ ಮಹಿಳೆ ಡಾ.ಕವಿತಾ ಮಿಶ್ರಾ ಉದ್ಘಾಟಿಸಿದರು.

ಮಿಷನ್ ಕಾಂಪೌಂಡ್‌ನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶ್ರಮ ಮತ್ತು ಧೃಡ ನಿರ್ಣಯದಿಂದ ಮಾತ್ರ ಉದ್ಯಮದಲ್ಲಿ ಯಶಸ್ಸು ಬರುತ್ತದೆ, ಸಮಾಜವು ಯಶಸ್ಸನ್ನು ಹೊಗಳುತ್ತದೆ ಆದರೆ ವೈಫಲ್ಯವನ್ನು ಟೀಕಿಸುತ್ತದೆ. ಮಹಿಳಾ ಉದ್ಯಮಿಗಳು ತಮ್ಮ ಗುರಿಗಳನ್ನು ಸಾಧಿಸಬೇಕು. ಪವರ್ ಸಂಸ್ಥೆಯ ಸಾಧನೆಗಳು ಮಹಿಳಾ ಸಬಲೀಕರಣಕ್ಕೆ ಬಲವಾದ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಪವರ್ ಪರ್ಬ- 2025 ಕಾರ್ಯಕ್ರಮವು ಫೆಬ್ರವರಿ 8 ರಿಂದ 9 ರವರೆಗೆ ಮಿಷನ್ ಕಾಂಪೌಂಡ್‌ನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ದೀಪ ಬೆಳಗಿಸಿ, ಪವರ್ ಪರ್ಬದಂತಹ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ಹೆಚ್ಚಿನ ಮಹಿಳಾ ಉದ್ಯಮಿಗಳಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಶಾಸಕ ಯಶಪಾಲ್ ಎ.ಸುವರ್ಣ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದರು, ಎಂಎಸ್‌ಎಂಇ ಜಂಟಿ ನಿರ್ದೇಶಕ ಕೆ.ಸಾಕ್ರೆಟಿಸ್ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ, ಭಾಗವಹಿಸಿದವರಿಗೆ ಶುಭ ಹಾರೈಸಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಪರ ಜಿಲ್ಲಾಧಿಕಾರಿ(ಪ್ರಭಾರ) ನಾಗರಾಜ್ ವಿ.ನಾಯಕ್, ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ ಸಿಇಒ ಡಾ.ಎ.ಪಿ.ಆಚಾರ್, ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ನರೇಶ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಖಜಾಂಚಿ ಪುಷ್ಪಾರಾವ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಿಯಾ ಕಾಮತ್ ಮತ್ತು ಕಾರ್ಯಕ್ರಮ ಸಂಯೋಜಕಿ ಸುಗುಣ ಎಸ್.ಸುವರ್ಣ ಪ್ರಸ್ತಾವಿಸಿದರು. ರೇಣು ಜಯರಾಂ, ಪುಷ್ಪಾ ಗಣೇಶ್, ತಾರಾ ತಿಮ್ಮಯ್ಯ ಸೇರಿದಂತೆ ಸದಸ್ಯರು ಅತಿಥಿಗಳನ್ನು ಪರಿಚಯಿಸಿದರು, ರೇಷ್ಮಾ ಸೈಯ್ಯದ್ ಪ್ರಾಯೋಜಕರಿಗೆ ವಂದನೆ ಸಲ್ಲಿಸಿದರು. ಡಾ. ಪೂಜಾ ಕಾಮತ್ ಮತ್ತು ಸುಪ್ರಿಯಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು, ಅರ್ಚನಾ ರಾವ್ ವಂದಿಸಿದರು.

 

 

 

LEAVE A REPLY

Please enter your comment!
Please enter your name here