
ಇಂದು ಆಧಾರ್ ಕಾರ್ಡ್ ಪ್ರತಿ ಯೊಬ್ಬರಿಗೂ ಬಹು ಮುಖ್ಯವಾದ ದಾಖಲೆಯಾಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ಹಿರಿಯವರೆಗೂ ಬಹು ಮುಖ್ಯವೆನಿಸಿಕೊಂಡಿದೆ. ಹಾಗಾಗಿ ಆಧಾರ್ ಕಾರ್ಡ್ ನಿಯಮದ ಬಗ್ಗೆ ನಾವು ತಿಳಿದುಕೊಳ್ಳುವುದು ಸಹ ಅಷ್ಟೆ ಮುಖ್ಯವಾಗುತ್ತದೆ. ಈ ಹಿಂದೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ತಿದ್ದುಪಡಿ ಮಾಡಿಕೊಳ್ಳಬೇಕಿದ್ದರೂ, ಅಂದರೆ ಹೆಸರು ಬದಲಾವಣೆ, ವಿಳಾಸ ಸರಿಪಡಿಸುವುಕೆ, ಮೊಬೈಲ್ ಬಳಕೆ ಇತ್ಯಾದಿ ಸರಿಪಡಿಸಲು ಆಧಾರ ಕಾರ್ಡ್ ಕೇಂದ್ರಕ್ಕೆ ಹೋಗಿ ತಿದ್ದುಪಡಿ ಮಾಡಿಕೊಳ್ಳಬೇಕಿತ್ತು. ಅದರೆ ಈಗ ಹಾಗಲ್ಲ ನಾವೇ ತಿದ್ದುಪಡಿ ಮಾಡಲು ಅವಕಾಶ ಕೂಡ ಇದೆ.
ಅನ್ ಲೈನ್ ತಿದ್ದುಪಡಿ
ಇದೀಗ ಆನ್ಲೈನ್ (online) ಮೂಲಕವೇ ನಾವೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಕೂಡ ಇದೆ. ನೀವು ನಿಮ್ಮ ಆಧಾರ್ ಕಾರ್ಡ್ ಪಡೆದುಕೊಂಡು ಹತ್ತು ವರ್ಷ ಆಗಿದ್ದರೆ ಅದರಲ್ಲಿ ವಿಳಾಸ ಅಥವಾ ಫೋಟೋ ಬದಲಾಯಿಸುವ ಅಗತ್ಯವಿದ್ದರೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ.
ಅವಕಾಶ ಇಲ್ಲ
UIDAI ಆಧಾರ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ನಿಜ, ಆದರೆ ಅದಕ್ಕೂ ಕೆಲವೊಂದು ಮಿತಿಗಳು ಇದ್ದು ಅದನ್ನು ನಾವು ಫಾಲೋ ಮಾಡಲೇ ಬೇಕಿದೆ. ನೀವು ನಿಮಗೆ ಬೇಕಾದಷ್ಟು ಸಲ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.
ಎಷ್ಟು ಬಾರಿ ಮಾಡಬಹುದು
ನೀವು ಆದಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವುದಾದರೆ ಲಿಂಗ ಬದಲಾವಣೆಯನ್ನು ಒಂದು ಬಾರಿ ಮಾತ್ರ ಮಾಡಬಹುದು. ಹೆಸರನ್ನು ಎರಡು ಬಾರಿ ಮಾತ್ರ ಬದಲಾವಣೆ ಮಾಡಲು ಅವಕಾಶ ಇದೆ. ವಿಳಾಸ ಬದಲಾವಣೆಗೆ ಯಾವ ಮಿತಿಯನ್ನು ಹೇಳಿಲ್ಲ.
ಲಿಂಕ್ ಮಾಡಿಸಿ
ಇಂದು ಆಧಾರ್ ಕಾರ್ಡ್ ಮುಖ್ಯ ದಾಖಲೆಯಾಗಿರುವುದರಿಂದ ನಿಮ್ಮ ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಇತ್ಯಾದಿ ಗಳಿಗೆ ಲಿಂಕ್ ಮಾಡಿಸುವುದು ಸಹ ಕಡ್ಡಾಯವಾಗಿದೆ. ನೀವು ಈ ಕೆಲಸ ಮಾಡದಿದ್ದರೆ ಸರ್ಕಾರದ ಯಾವುದೇ ಸೌಲಭ್ಯ ಗಳು ನಿಮಗೆ ಬರುವುದಿಲ್ಲ
ನವೀಕರಣ ಮಾಡಿ
ಆದೇ ರೀತಿ ಆಧಾರ್ ನವೀಕರಣ ಮಾಡುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಮಾಡಿ ಹತ್ತು ವರುಷ ಆಗಿದ್ದಲ್ಲಿ ನೀವು ನವೀಕರಣ ಮಾಡಲೇಬೇಕು. ಇದರಿಂದ ನಿಮ್ಮ ಆಧಾರ್ ನಲ್ಲಿ ಮೋಸದ ಜಾಲ , ವಂಚನೆ ಆಗಿದ್ದರೆ ಪತ್ತೆ ಹಚ್ಚಲು ಸುಲಭ ವಾಗುತ್ತದೆ.
