
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಪರ ಹಿತ ಚಿಂತನೆಯುಳ್ಳ ಅನೇಕ ಯೋಜನೆ ಈ ಹಿಂದಿನಿಂದ ಕೂಡ ಪರಿಚಯಿಸಿದ್ದನ್ನು ಕಾಣಬಹುದು. ಹೀಗಾಗಿಯೇ ಮಹಿಳೆ ಕೂಡ ಪುರುಷರಂತೆ ಎಲ್ಲ ವಿಧವಾದ ಸೇವಾ ಸೌಲಭ್ಯ ಪಡೆಯುವ ಜೊತೆಗೆ ಅನೇಕ ವಿಧದಲ್ಲಿ ಸಾಧನೆ ಕೂಡ ಮಾಡುತ್ತಿದ್ದಾರೆ. ಮಹಿಳೆಯರಿಗೆ ಇಂದು ಆರ್ಥಿಕ , ಸಾಮಾಜಿಕ , ಸಾಂಸ್ಕೃತಿಕ, ಶೈಕ್ಷಣಿಕ ಇನ್ನು ಅನೇಕ ರಂಗದಲ್ಲಿ ತನ್ನನ್ನು ತಾನು ಸಾಮರ್ಥ್ಯವಂತಳೆಂದು ಸಾಧಿಸಿ ತೋರಿಸಿದ್ದಾಳೆ.
ಇಂದು ಹೆಣ್ಣು ಮಕ್ಕಳ ಶಿಕ್ಷಣ ಮಾತ್ರವಲ್ಲದೇ ಹಲವಾರು ಆರೋಗ್ಯ ಸೌಲಭ್ಯ ಕೂಡ ಮಹಿಳೆಯರಿಗಾಗಿಯೇ ನೀಡಲಾಗುತ್ತಿದೆ. ಇಂತಹ ಆರೋಗ್ಯ ಸೇವೆಯಲ್ಲಿ ಮೊದಲು ನೆನಪಾಗುವುದು ಜನನಿ ಸುರಕ್ಷಾ ಯೋಜನೆ. ಇದು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಜಾರಿಗೆ ತಂದ ಯೋಜನೆ ಆಗಿದ್ದರೂ, ಗ್ರಾಮೀಣ ಭಾಗದಲ್ಲೊ ಈ ಸೇವೆ ಉಪಯೋಗ ಆದದ್ದು ನಗರಕ್ಕಿಂತಲೂ ಹೆಚ್ಚು ಎನ್ನಬಹುದು. ಈ ಬಗ್ಗೆ ಕೆಲ ಮಹತ್ವದಾಯಕ ಮಾಹಿತಿಯನ್ನು ಈ ಲೇಖನದ ಮೂಲಕ ನಾವಿಂದು ನಿಮಗೆ ತಿಳಿಸಲಿದ್ದೇವೆ.
ಉದ್ದೇಶ ಏನು?
ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದ್ದ ಯೋಜನೆ ಇದಾಗಿದೆ. ಗ್ರಾಮೀಣ ಭಾಗದಲ್ಲಿ ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ತಡೆಗಟ್ಟುವ ಮುಖ್ಯ ಉದ್ದೇಶ ಕೂಡ ಈ ಯೋಜನೆಯೂ ಒಳಗೊಂಡಿದೆ. ಇದು ಕೇಂದ್ರ ಸರ್ಕಾರದ ಒಂದು ಮಹತ್ವದಾಯಕ ಕಾರ್ಯಕ್ರಮವಾಗಿದ್ದು, ಆಶಾ ಕಾರ್ಯಕರ್ತೆಯರು ಈ ಯೋಜನೆಯನ್ನು ಗ್ರಾಮೀಣ ಮಟ್ಟದಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ. ಇವರು ಪ್ರಸವಪೂರ್ವ ಆರೈಕೆ ಪಡೆಯಲು ಮತ್ತು ಗರ್ಭಿಣಿ ಆರೈಕೆ, ಹೆರಿಗೆ ನಂತರ ಮಗು ಮತ್ತು ತಾಯಿ ಆರೈಕೆ, ಸ್ಥಿತಿಗತಿ ಬಗ್ಗೆ ನಿಗಾ ವಹಿಸಲಾಗುವುದು.
ಮಗುವಿಗೆ ಲಸಿಕೆ ಹಾಕಿಸುವುದು. ಎದೆಹಾಲು ಉಣಿಸುವ ಕ್ರಮ, ಆಸ್ಪತ್ರೆ ಯಲ್ಲಿ ಸೇವೆ ಒದಗಿಸುವ ಅನೇಕ ಜವಾಬ್ದಾರಿಯನ್ನು ಸರ್ಕಾರ ಈ ಯೋಜನೆ ಮೂಲಕ ಸೇವೆ ನೀಡಲು ಮುಂದಾಗುತ್ತಿದೆ. ಇದು ಬಹುತೇಕ ಎಲ್ಲ ಸ್ತ್ರೀಯರಿಗಾಗಿ ಇರುವ ಯೋಜನೆ ಎಂದು ಹೇಳಿದರು. ಕೆಲ ನಿರ್ದಿಷ್ಟ ಅಗತ್ಯ ಮಾನದಂಡ ಕೂಡ ತಿಳಿಸಲಾಗಿದೆ ಅವುಗಳನ್ನು ಈ ಕೆಳಗಿನಂತೆ ಕಾಣಬಹುದು.
ಅರ್ಹತೆ
*ಮಹಿಳೆ BPLಕಾರ್ಡ್ದಾರರಾಗಿರಬೇಕು.
*18ವರ್ಷ ಮೇಲ್ಪಟ್ಟಿರಬೇಕು.
*ಮೊದಲಿನ ಎರಡು ಮಕ್ಕಳಿಗೆ ಮಾತ್ರ ವಿಶೇಷ ಸಹಾಯಧನದ ಸೌಲಭ್ಯ ಸಿಗಲಿದೆ.
*ವಾರ್ಷಿಕ ಆದಾಯ ಜಾತಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಕ್ಕಿಂತಲೂ ಕಡಿಮೆ ಇರಬೇಕು.
*ಒಮ್ಮೆ ಈ ಯೋಜನೆಗೆ ಆಯ್ಕೆ ಆದರೆ ಸರ್ಕಾರ ಸೌಲಭ್ಯ ಸಿಗಲಿದೆ.
ಒಟ್ಟಾರೆಯಾಗಿ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಇದನ್ನು ಕಾರ್ಯಗತಗೊಳಿಸಲು ರಾಜ್ಯದ ಸಹಕಾರ ಕೂಡ ಒಂದು ಮಟ್ಟದಲ್ಲಿ ಅಧಿಕವಾಗೇ ಕೇಂದ್ರಕ್ಕೆ ಸಿಗುತ್ತಿದೆ ಎಂದು ಹೇಳಬಹುದು.
