
ಇಂದು ಕೇಂದ್ರ ಸರ್ಕಾರ ಬಹಳಷ್ಟು ಯೋಜನೆಯನ್ನು ಜಾರಿಗೆ ತರುತ್ತಲೆ ಇದೆ. ಅದೇ ರೀತಿ ಬಡ ವರ್ಗದ ಜನತೆಗೆ ಸಹಾಯಕವಾಗಲೆಂದು ಇಂದು ಹೆಚ್ಚಿನ ಸೌಲಭ್ಯ ಜಾರಿಗೆ ತರುತ್ತಿದೆ. ಜನತೆಗೆ ಮುಖ್ಯವಾಗಿ ಬೇಕಾಗಿರುವುದೇ ಆರೋಗ್ಯ ಸೌಲಭ್ಯ. ಇದೀಗ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರ ಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರವು ರೂ 2,50,000 ಮತ್ತು ರೂ 5,00,000 ವರೆಗೆ ಪ್ರೋತ್ಸಾಹವನ್ನು ನೀಡುತ್ತದೆ.
ಗುಣಮಟ್ಟದ ಆರೋಗ್ಯ
ಇತ್ತೀಚಿನ ದಿನಗಳಲ್ಲಿ ಸ್ವಂತ ವ್ಯಾಪಾರ ಮಾಡಬೇಕು ಅನ್ನುವ ಆಸಕ್ತಿ ಹೆಚ್ಚಿನವರಿಗೆ ಇದ್ದೆ ಇರುತ್ತದೆ. ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯ ಮಾಡಿಸುವ ಯೋಜನೆ ಇದಾಗಿದ್ದು, ಬಡವರ್ಗದ ಜನತೆಗೆ ಬಹಳಷ್ಟು ಸಹಾಯಕವಾಗಲಿದೆ. ಈ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ಜನೌಷಧಿ ಕೇಂದ್ರ
ಇದುವರೆಗೆ ದೇಶದಲ್ಲಿ ಸುಮಾರು 9400ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮ ಪಡುತ್ತಿದೆ. ಜೆನೆರಿಕ್ ಔಷಧಾಲಯಗಳಲ್ಲಿನ ಔಷಧವು ಹೊರಗಿನ ಮಾರುಕಟ್ಟೆಗಿಂತ 50 ರಿಂದ 90 ಪ್ರತಿಶತದಷ್ಟು ಕಡಿಮೆಯಾಗಿದೆ. ಇದು ಸುಮಾರು 1600 ಕ್ಕೂ ಹೆಚ್ಚು ಔಷಧಿಗಳು, 250 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ಸಾಧನಗಳು, ನ್ಯೂಟ್ರಾಸ್ಯುಟಿಕಲ್ಸ್, ಆಯುಷ್ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.
ನೀವು ತೆರೆಯಬಹುದು
ಈ ಜನೌಷಧಿ ಕೇಂದ್ರವನ್ನು ನೀವು ತೆರೆಯಬಹುದಾಗಿದ್ದು, ದೇಶಾದ್ಯಂತ ಕೆಲವು ಬಡವರ್ಗದ ಜನತೆಗೆ ಬೇಕಾದ ಔಷಧಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಡತನವನ್ನು ಗಮನದಲ್ಲಿಟ್ಟುಕೊಂಡು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಪಡೆಯಬಹುದು. ಜನೌಷಧಿಯ ದರ ಶೇ 10ರಿಂದ ಶೇ.90ರಷ್ಟು ಕಡಿಮೆಯಾಗಿದ್ದು, ಜನೌಷಧಿ ಸಪ್ತಾಹದ ಪರವಾಗಿ ದೇಶಾದ್ಯಂತ ಇಂದು 1,000 ಆರೋಗ್ಯ ಶಿಬಿರಗಳನ್ನು ಈಗಾಗಲೇ ಏರ್ಪಡಿಸಲಾಗಿದೆ. ಇದರ ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ ಸೇರಿದಂತೆ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತರಬೇತಿ ಕಾರ್ಯಕ್ರಮ ಜಾರಿಗೆ ತರುತ್ತಿದೆ.
ನೋಂದಾವಣೆ ಮಾಡಿ
ಮೊದಲು ನೀವು http://janaushadhi.gov.in/ ಮೂಲಕ APPLY FOR KENDRA ಇಲ್ಲಿ ಕ್ಲಿಕ್ ಮಾಡಿ. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ. ನೀವು ಆಯ್ಕೆ ಮಾಡಿದ ಪ್ರದೇಶದಲ್ಲಿ ಜನೌಷಧಿ ಕೇಂದ್ರವನ್ನು ಸ್ಥಾಪಿಸುವ ಆಯ್ಕೆ ಇದ್ದರೆ ನೋಂದಾವಣೆ ಮಾಡಿ.
