
ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್ ಸರ್ಕಾರ ಅನೇಕ ಕಾರಣದಿಂದ ಈಗ ಜನ ಮೆಚ್ಚುಗೆ ಪಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ನಿಂದ ಘೋಷಣೆ ಆಗಿದ್ದು ಅವೆಲ್ಲವೂ ಕೂಡ ಒಂದೊಂದಾಗೇ ಈಡೇರಿಕೆ ಕೂಡ ಆಗಿದೆ. ಅದಾದ ಬಳಿಕ ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂಚೆ ನೀಡಿದ್ದ ಭರವಸೆ ಈಡೇರಿಸುತ್ತಲೇ ಮುಂದಿನ ಲೋಕಸಭೆಗೆ ಈಗಲೇ ಜನ ಮನ್ನಣೆ ಗಳಿಸುತ್ತಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮೊದಲ ಕಂತಿನ ಹಣ ಬಂದ ಬಳಿಕ ಬರದೇ ಇದ್ದವರಿಗೆ ಮುಂದಿನ ತಿಂಗಳು ಬರುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ಮೂರು ಕಂತು ಬಂದರೂ ಒಮ್ಮೆ ಕೂಡ ಹಣ ಬಾರದೇ ಇದ್ದವರೂ ಸಹ ಇದ್ದಾರೆ ಹಾಗಾದರೆ ಅವರಿಗೆ ಹಣ ಬರೋದೆ ಇಲ್ವಾ ಅನ್ನೊರಿಗೆ ಈ ಲೇಖನದ ಮೂಲಕ ನಾವಿಂದು ಉತ್ತರ ನೀಡಲಿದ್ದೇವೆ.
ಗೃಹಲಕ್ಷ್ಮಿ ಯೋಜನೆ ಮನೆಯ ಯಜಮಾನಿಗೆ ಆರ್ಥಿಕ ಉತ್ತೇಜನ ನೀಡುವ ಸಲುವಾಗಿ ಪ್ರತೀ ತಿಂಗಳು ಕೂಡ 2000 ನೀಡ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಯೋಜನೆ ಆಗಿತ್ತು. ಆದರೆ ಹಣ ಬಂದಿಲ್ಲ ಅನ್ನೋರು ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ ಎಂದು ದೂರುತ್ತಿದ್ದಾರೆ. ಅದಕ್ಕೆ ವಿಪಕ್ಷ ನಾಯಕರು ಕೂಡ ಸಾತ್ ನೀಡುತ್ತಿದ್ದಾರೆ. ಈ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮಾಧ್ಯಮದ ಮುಂದೆ ಬಹಿರಂಗವಾಗಿ ಮಾತಾಡಿದ್ದಾರೆ.
ಇತ್ತೀಚೆಗೆ ಅವರು ಗೃಹಲಕ್ಷ್ಮಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದು ಆಗ ಮಾಧ್ಯಮದವರು ಮೂರು ತಿಂಗಳ ಗೃಹಲಕ್ಷ್ಮಿ ಹಣ ಬರದೇ ಬಾಕಿ ಇದ್ದವರಿಗೆ ಗೃಹಲಕ್ಷ್ಮಿ ಹಣ ಬರುತ್ತಾ ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ. ನಮ್ಮ ಸರ್ಕಾರದ ಮೇಲೆ ಜನ ನಂಬಿಕೆ ಇರಿಸಿದ್ದಾರೆ. ಆದರೆ ಆ ನಂಬಿಕೆ ಮೋಸ ಎಂದಿಗೂ ಆಗಲಾರದು. ಗೃಹಲಕ್ಷ್ಮಿ ಹಣ ಬರದಿರಲು ಬ್ಯಾಂಕ್ ಖಾತೆಯ ಸಮಸ್ಯೆ ಮುಖ್ಯ ಕಾರಣ ಆಗಿದೆ. ಅದೇ ರೀತಿ ಬ್ಯಾಂಕ್ ಖಾತೆಗೆ ಸಮಸ್ಯೆ ಇದ್ದವರು ಸಮಸ್ಯೆ ಶೀಘ್ರ ಪರಿಹಾರ ಮಾಡಿಕೊಳ್ಳಬೇಕು ಹೀಗಾಗಿ ಈ ಬಗ್ಗೆ ಬ್ಯಾಂಕ್ ಮುಖ್ಯಸ್ಥರಿಗೆ ಕೂಡ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂರು ತಿಂಗಳಿನಿಂದ ಹಣ ಬಂದಿಲ್ಲ ಎಂಬ ದೂರು ಅನೇಕ ದಿನದಿಂದ ಕೇಳಿ ಬರುತ್ತಿದೆ. ಬರದೇ ಇದ್ದ ಹಣ ಒಂದೇ ಬಾರಿ ಒಟ್ಟಿಗೆ ಜಮಾ ಆಗಲಿದೆ. ಆದರೆ ನಿಮ್ಮ ಬ್ಯಾಂಕ್ ಸಮಸ್ಯೆ ಅಥವಾ ಸುಸ್ಥಿತಿ ಇಲ್ಲದಿರುವುದು ಮತ್ತು ದಾಖಲೆ ಸಮಸ್ಯೆ ಇರುವುದು ಹಾಗೂ ಬ್ಯಾಂಕಿನಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಯದೆ ಇದ್ದರೆ ಹಣ ಬರುವುದು ವಿಳಂಬವಾಗಿತ್ತು. ಆದರೆ ಇನ್ನು ಮುಂದೆ ಹೀಗೆ ಆಗಲಾರದು. ಬ್ಯಾಂಕ್ ಸಾಲ ಪಡೆದಿದ್ದರೆ ಅದಕ್ಕೆ ಗೃಹಲಕ್ಷ್ಮಿ ಹಣ ಕಟ್ ಆಗುವ ಸಾಧ್ಯತೆ ಇದ್ದು ಈ ಬಗ್ಗೆ ಕೂಡ ಪರಿಶೀಲನೆ ಮಾಡಿಕೊಳ್ಳಿ ಎಂದಿದ್ದಾರೆ.
ಯಾವಾಗ ಬರುತ್ತೆ?
ಹಾಗಾದರೆ ಪ್ರತೀ ತಿಂಗಳು ಯಾವಾಗ ಗೃಹಲಕ್ಷ್ಮಿ ಬರುತ್ತೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಪ್ರತೀ ತಿಂಗಳು 15ರಿಂದ 20ನೇ ತಾರೀಖಿನ ಒಳಗೆ ಹಣ ಬರಲಿದೆ. ಫಲಾನುಭವಿಗಳು ಈ ಬಗ್ಗೆ ಯಾವುದೇ ಗೊಂದಲವಾಗುವುದು ಬೇಡ. ಈ ಎಲ್ಲ ಸಮಸ್ಯೆ ಶೀಘ್ರ ಪರಿಹಾರ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
