
ಈ ಆಧುನಿಕ ಯುಗದಲ್ಲಿ ಶಿಕ್ಷಣ ಅನ್ನೋದು ಬಹಳ ಮುಖ್ಯ. ಇಂದು ಶಿಕ್ಷಣ ಪಡೆಯಲು ಕಷ್ಟ ಕೂಡ ಇಲ್ಲ, ಬಡವರ್ಗದ ಜನರೂ ಕೂಡ ಇಂದು ಶಿಕ್ಷಣ ಪಡೆಯಬಹುದಾಗಿದೆ. ಬಡವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಇದೀಗ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸದಾದ ಯೋಜನೆಯನ್ನು ಕೂಡ ಜಾರಿಗೆ ತಂದಿದೆ.
ಯಾವ ಯೋಜನೆ
ಹಣದ ಸಮಸ್ಯೆಯಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮೀ ಯೋಜನೆ ಜಾರಿಗೆ ಮಾಡಿದೆ. ಈ ಯೋಜನೆಯ ಮೂಲಕ ಹಲವಾರು ಬಡವರ್ಗದ ಮಕ್ಕಳಿಗೆ ಸಹಾಯವಾಗಬಹುದು.
ಯಾವ ಸೌಲಭ್ಯ
ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶೀಪ್ ಮತ್ತು ಶಿಕ್ಷಣ ಸಾಲ . ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು 13 ಬ್ಯಾಂಕ್‌ಗಳಿಂದ 22 ರೀತಿಯ ಸಾಲಗಳನ್ನು ಪಡೆಯಬಹುದಾಗಿದೆ.
ಯಾವ ಬ್ಯಾಂಕ್ ಮೂಲಕ ಸಿಗಲಿದೆ
ದೇಶದ 13 ಬ್ಯಾಂಕ್‌ಗಳು 22 ರೀತಿಯ ಶೈಕ್ಷಣಿಕ ಸಾಲ ವನ್ನು ನೀಡುವ ಗುರಿ ಹೊಂದಿದ್ದು, ಇವುಗಳಲ್ಲಿ ಎಸ್‌ಬಿಐ, ಐಡಿಬಿಐ ಬ್ಯಾಂಕ್, ಮತ್ತು ಕೆನರಾ ಬ್ಯಾಂಕ್ ಗಳೂ ಇದ್ದು ಇಲ್ಲಿ ಕಡಿಮೆ ಬಡ್ಡಿಯ ಮೂಲಕ ನೀವು ಸಾಲ ಸೌಲಭ್ಯ ಪಡೆಯಬಹುದಾಗಿದೆ.
ವಿದ್ಯಾ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ನೀವು https://www.vidyalakshmi.co.in/Students/ ಈ ಲಿಂಕ್‌ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಈ ಯೋಜನೆಗೆ ನೊಂದಣಿ ಆದ ನಂತರದಲ್ಲಿ ಅಂದ್ರೆ ಇಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿದ ನಂತರ ಲಾಗಿನ್ ಆಗಲು ಸಾಧ್ಯ.
ಸ್ಕಾಲರ್ಶಿಪ್ ಸಿಗಲಿದೆ
ಬಡ ವಿದ್ಯಾರ್ಥಿಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಹಣದ ಸಮಸ್ಯೆಯಿಂದ ಕೆಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಡುತ್ತಾರೆ. ಅಂತವರಿಗೆ ಈ ಯೋಜನೆ ಸಿಗಲಿದ್ದು ಸ್ಕಾಲರ್ಶಿಪ್ ಕೂಡ ದೊರಕಲಿದೆ.
