Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ವಿವಾದ್ ಸೆ ವಿಶ್ವಾಸ್ ಯೋಜನೆ ಹಕ್ಕಿನ ಅರ್ಜಿ ಅವಧಿ ವಿಸ್ತರಣೆ

ವಿವಾದ್ ಸೆ ವಿಶ್ವಾಸ್ ಯೋಜನೆ ಹಕ್ಕಿನ ಅರ್ಜಿ ಅವಧಿ ವಿಸ್ತರಣೆ

0
ವಿವಾದ್ ಸೆ ವಿಶ್ವಾಸ್ ಯೋಜನೆ ಹಕ್ಕಿನ ಅರ್ಜಿ ಅವಧಿ ವಿಸ್ತರಣೆ

ಮೊದಲಿನಿಂದಲೂ ಸರ್ಕಾರ ಜನಪರ ಕಾರ್ಯಕ್ರಮ ಪರಿಚಯಿಸುತ್ತಲೇ ಬಂದಿದ್ದು, ತನ್ನ ಯೋಜಿತ ಕ್ರಮದಲ್ಲಿ ಸರ್ಕಾರದ ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ವಿವಾಧಗಳು ಬಾಕಿ ಉಳಿದು ಇತ್ಯರ್ಥ ಆಗದೆ ಇದ್ದರೆ ಅಂತಹ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಲು ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಕೆಲ ಅಗತ್ಯ ಆದೇಶವನ್ನು ಹೊರಡಿಸಿದ್ದಾರೆ. ಇದಕ್ಕಾಗಿ ಕೆಲ ಯೋಜನೆ ಸಹ ಸಿದ್ಧಗೊಂಡಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವುದು ಈ ಯೋಜನೆ?
ಕೇಂದ್ರ ಸರ್ಕಾರದ ಅಧೀನದಲ್ಲಿ ವಿವಾದ್ ಸೇ ವಿಶ್ವಾಸ್ ಎಂಬ ಯೋಜನೆ ಪರಿಚಯಿಸಲಾಗಿದ್ದು, ಇದರ ಮೂಲಕ ಸರ್ಕಾರಿ ಸಂಬಂಧಿತ ವ್ಯಾಜ್ಯ ಬಗೆಹರಿಸಲು ಚಿಂತಿಸಲಾಗಿದೆ. ವಿವಾದ್ ಸೇ ವಿಶ್ವಾಸ್ ಅನ್ನು ಮೊದಲು ಕಾರ್ಯ ರೂಪಕ್ಕೆ ತಂದಿದ್ದು ಜುಲೈ 15 ರಂದು ಆಬಳಿಕ ವಿವಾದಿತ ಭೂ ಪ್ರದೇಶ, ಟೆಂಡರ್ ಇತರ ಗುತ್ತಿಗೆದಾರರಿಂದ ಕ್ಲೈಂ ಸಲ್ಲಿಸಲು ಅಕ್ಟೋಬರ್ 31ರ ವರೆಗೆ ಅವಕಾಶ ನೀಡಲಾಗಿತ್ತು.

ಅವಧಿ ವಿಸ್ತರಣೆ
ವಿವಾದ್ ಸೇ ವಿಶ್ವಾಸ್ ಯೋಜನೆ ಮೂಲಕ ವಿವಾಧ ಇತ್ಯರ್ಥಕ್ಕೆ ಪ್ರಯತ್ನಪಟ್ಟಿದ್ದು ಗುತ್ತಿಗೆದಾರರಿಂದ ಕ್ಲೈಂ ಮಾಡಲು ನಿರ್ದಿಷ್ಟ ಗಡುವು ನೀಡಿದ್ದು, ಈ ಗಡುವು ವಿಸ್ತರಣೆಗೆ ಸಾಕಷ್ಟು ಮನವಿ ಬಂದಿತ್ತು. ಅಕ್ಟೋಬರ್ 31 ಮುಗಿದಿದ್ದು ಹೀಗಾಗಿ ಅವಧಿಯನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೆ ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದು ಎಲ್ಲ ದೇಶಿಯ ಮಟ್ಟದ ವಿವಾದ ಬಗೆಹರಿಸಲು ಬಹಳ ಸಹಕಾರಿ ಎನ್ನಬಹುದು.

ಸರ್ಕಾರ ಇ ಮಾರುಕಟ್ಟೆ ಸ್ಥಳ ಇರಿಸಲಾಗಿದ್ದು ಮೀಸಲಿರಿಸಲಾದ ವೆಬ್ಸೈಟ್ ಪುಟವನ್ನು ಅಭಿವೃದ್ಧಿ ಮಾಡಲಾಗಿದೆ. ಯೋಜನೆಯ ಮೂಲಕ ಏಪ್ರಿಲ್ 30ರಂದು ಅದಕ್ಕೂ ಮೊದಲು ಅಂಗೀಕರಿಸಲಾದ ಮೊತ್ತವನ್ನು ನ್ಯಾಯಾಲಯ ನೀಡುವಂತೆ ಕೆಲ ಮಾರ್ಗ ಸೂಚಿ ನೀಡಿದೆ. ಗುತ್ತಿಗೆದಾರರಿಗೆ ಸೇರಬೇಕಾದ ನಿವ್ವಳ ಮೊತ್ತವು 65ಪ್ರತಿಶತದಷ್ಟು ಪರಿಹಾರ ಮೊತ್ತವನ್ನು ನೀಡಲಾಗುವುದು. ರೈಲ್ವೇ ಸಚಿವಾಲಯದ ಮೂಲಕ ಜಿಇಎಂ ಇಲ್ಲದ ಒಪ್ಪಂದಕ್ಕೆ ಗುತ್ತಿಗೆದಾರರು ಅರ್ಜಿ ಸಲ್ಲಿಸಲು ಸಹ ಇದೇ ಯೋಜನೆ ಸಹಕಾರಿ ಆಗಲಿದೆ. ಹಾಗಾಗಿ ಈ ಒಂದು ವಿವಾದ್ ಸೇ ವಿಶ್ವಾಸ್ ಯೋಜನೆ ಮೂಲಕ ಅನೇಕ ಗುತ್ತಿಗೆದಾರರ ಸಮಸ್ಯೆ ಬಗೆಹರಿಯಲಿದೆ ಎಂದು ಈ ಮೂಲಕ ಹೇಳಬಹುದು‌.

IREPSಮೂಲಕ E ಪ್ರಾಕ್ಯೂರ್ ಮೆಂಟ್ ಸಿಸ್ಟಂ ಮೂಲಕ ನೋಂದಾಯಿಸಿ ತಮಗೆ ಇರುವ ಹಕ್ಕನ್ನು ಗುತ್ತಿಗೆದಾರರು ಚಲಾಯಿಸಬಹುದು. ಈ ಮೂಲಕ ಗುತ್ತಿಗೆದಾರರಿಗೆ ಇರುವ ವಿವಾಧಿತ ವಿಚಾರಕ್ಕೆ ಸಂಬಂಧಿಸಿದ ಮೇಲ್ಮನವಿ ಸಲ್ಲಿಸಿ ವಿವಾದ ಬಗೆಹರಿಸಲು ಸಾಧ್ಯವಾಗುವ ಈ ಒಂದು ವಿವಾದ್ ಸೇ ವಿಶ್ವಾಸ್ ಯೋಜನೆ ಅವಧಿ ವಿಸ್ತರಣೆ ಆಗಿದ್ದು, ಅನೇಕ ವಿವಾದ ಶೀಘ್ರ ಪರಿಹಾರ ಆಗಲಿದೆ ಎಂದರೂ ತಪ್ಪಲ್ಲ. ಅವಧಿ ವಿಸ್ತರಣೆ ಆದ ಕಾರಣ ಸಮಸ್ಯೆ ಬಗೆಹರಿಸಲು ಸಾಕಷ್ಟು ಅವಕಾಶ ಸಿಕ್ಕಂತಾಗುವುದು.

 

LEAVE A REPLY

Please enter your comment!
Please enter your name here