
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಯಲ್ಲಿ ಮೊದಲಿಗೆ ಚಾಲ್ತಿ ಸಿಕ್ಕಿದ್ದ ಯೋಜನೆ ಎಂದರೆ ಅದು ಶಕ್ತಿ ಯೋಜನೆ. ಶಕ್ತಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದು ಈಗ ತುಂಬಾ ದಿನಗಳು ಕಳೆದಿವೆ. ಈ ಶಕ್ತಿ ಯೋಜನೆ ಮೂಲಕ ರಾಜ್ಯದ ಎಲ್ಲ ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆಧಾರ್ ಕಾರ್ಡ್, ಓಟಾರ್ ಐಡಿ ಇವಿಷ್ಟನ್ನೆ ನೀಡಿದರೆ ಸಾಕು ರಾಜ್ಯಾದ್ಯಂತ ಪ್ರಯಾಣ ಮಾಡಬಹುದಾಗಿದೆ.
ಶಕ್ತಿ ಯೋಜನೆ ಯಶಸ್ವಿಯಾಗಿದೆ ಎಂದು ಸಾಬೀತು ಮಾಡಲು ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕ ಆಗಿರುವುದನ್ನು ಕಾಣಬಹುದು. ಶಕ್ತಿ ಯೋಜನೆ ಬಳಿಕ ಸರ್ಕಾರಿ ಬಸ್ ಸಂಖ್ಯೆ ಸಾಕಾಗುತ್ತಿಲ್ಲ ಎಂದು ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಮಹಿಳೆಯರೇ ಸರ್ಕಾರಿ ಬಸ್ ನಲ್ಲಿ ತುಂಬಿಹೋಗುತ್ತಿದ್ದು, ಇದುವರೆಗೆ 92ಕೋಟಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದು ತಿಳಿದು ಬಂದಿದೆ. ಈ ನವೆಂಬರ್ ತಿಂಗಳ ಒಳಗೆ ಈ ಸಂಖ್ಯೆ 100 ಕೋಟಿ ದಾಟಬಹುದು.
ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, ಸರ್ಕಾರ ಕೂಡ ಹೆಚ್ಚುವರಿ ಬಸ್ ಬಿಡಲು ಚಿಂತನೆ ನಡೆಸುತ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಆಧಾರದ ಮೇಲೆ ಸರಾಸರಿ 65ಲಕ್ಷ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ರಸ್ತೆ ನಿಗಮಗಳಿಗೂ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು. ಜೂನ್ 11 ರಿಂದ ಆರಂಭವಾದ ಶಕ್ತಿ ಯೋಜನೆ ಅಡಿಯಲ್ಲಿ 92.75 ಕೋಟಿ ಮಹಿಳೆಯರು ಈವರೆಗೆ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆ ಮೂಲಕ ಮಹಿಳೆಯರು ನಾಲ್ಕು ವಾಯುವ್ಯ ಭಾಗದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಬಸ್ ಸಂಖ್ಯೆ ಕೆಲವೇ ದಿನದಲ್ಲಿ ಏರಿಕೆಯಾಗಲಿದೆ. ನೌಕರರ ಸಂಖ್ಯೆ ಕೂಡ ಕೂಡಲೇ ಅಧಿಕ ಆಗಲಿದೆ.
ನವೆಂಬರ್ 9ಕ್ಕೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 2,200 ಕೋಟಿ ರೂ. ದಾಟಿದೆ. ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಕೆಲ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ. ಈ ಮೂಲಕ ಶಕ್ತಿ ಯೋಜನೆಯ ಪ್ರಸ್ತುತ ಸ್ಥಿತಿ ಅನಾವರಣ ಆಗಿದೆ ಎಂದು ಹೇಳಬಹುದು. ಶಕ್ತಿ ಯೋಜನೆ ಬಂದ ಬಳಿಕ ಮಹಿಳೆಯರು ಮಕ್ಕಳು ಎಲ್ಲರಿಗೂ ಉಚಿತ ಪ್ರಯಾಣಕ್ಕೆ ಹೆಚ್ಚು ಉಪಯುಕ್ತವಾಗುತ್ತಿದೆ. ಧಾರ್ಮಿಕ ಪ್ರವಾಸ, ಕೆಲಸ ಕಾರ್ಯ ಇತರ ಪ್ರಯಾಣಕ್ಕೆ ಇದೊಂದು ಉಪಯುಕ್ತ ಕಾರ್ಯ ಎನ್ನಬಹುದು.
ಸಚಿವರು ಹೇಳಿದ್ದೇನು?
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ವಿರೋಧ ಪಕ್ಷದ ಸಾಕಷ್ಟು ವಿರೋಧದ ನಡುವೆ ಹಲವು ಸವಾಲಿನ ನಡುವೆಯೇ ಶಕ್ತಿ ಯೋಜನೆ ಬಹುಮಟ್ಟಿಗೆ ಯಶಸ್ವಿಯಾಗಿದೆ. ಇದು ಸಾಕಷ್ಟು ಮಹಿಳೆಯರಿಗೆ ಸಹಕಾರಿಯಾಗಿದೆ. 100ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಸೇವೆ ಪಡೆದು ಈ ಯೋಜನೆಗೆ ಯಶಸ್ವಿ ಸಾಧನೆಯಾಗಲಿದೆ. ಹಾಗಾಗಿ ಈ ಸಂಭ್ರಮ ಆಚರಣೆಗೆ ಪ್ರಯತ್ನ ಪಡಲಾಗುತ್ತಿದೆ. ಹಾಗಾಗಿ ನ.17ರಂದು ವಿಶೇಷ ಕಾರ್ಯಕ್ರಮ ಮಾಡಬಹುದು ಎಂದು ಚಿಂತನೆ ಮಾಡಲಾಗುತ್ತಿದೆ.
